ಯಾದಗಿರಿ | ಪದವಿ ಪೂರ್ವ ಉಪನಿರ್ದೇಶಕರಾಗಿ ರುದ್ರಗೌಡ ಪಾಟೀಲ್ ಅಧಿಕಾರ ಸ್ವೀಕಾರ
Update: 2025-05-03 19:33 IST
ಯಾದಗಿರಿ : ಗಿರಿಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಹೊಸ ಉಪನಿರ್ದೇಶಕರಾಗಿ ರುದ್ರಗೌಡ ಮಾಲಿ ಪಾಟೀಲ್ ಸಿಂಗನಳ್ಳಿ ಅವರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ದೀರ್ಘಕಾಲದ ಅನುಭವ ಹೊಂದಿರುವ ರುದ್ರಗೌಡ ಮಾಲಿ ಪಾಟೀಲ ಅವರು ಮುಲತ ಶಹಾಪುರ ತಾಲೂಕಿನ ಶಿಂಗನಹಳ್ಳಿ ಗ್ರಾಮದವರು. ಯಾದಗಿರಿ ಜಿಲ್ಲೆಯ ವಿವಿಧ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸತತ 29 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇವರು, ಜಿಲ್ಲೆಯಲ್ಲಿ ಪದವಿ ಪೂರ್ವ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಬದ್ಧರಾಗಿದ್ದಾರೆ.
ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.