ಯಾದಗಿರಿ: ದಸರಾ ಹಬ್ಬದ ನವರಾತ್ರಿಯ ಒಂಬತ್ತು ದಿನಗಳ ಕಾಲ ಆದಿಶಕ್ತಿ ಸ್ವರೂಪಿಣಿ ಜಗನ್ಮಾತೆ ಭುವನೇಶ್ವರಿ ದೇವಿಯನ್ನು ಪೂಜಿಸುವುದರಿಂದ ಅನೇಕ ಕಷ್ಟಗಳು ದೂರವಾಗಿ, ಜೀವನದಲ್ಲಿ ಸಫಲತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯಪಟ್ಟರು.

ನಗರದ ಚೇತನ ಏರಿಯಾದಲ್ಲಿನ ಬೆಟ್ಟದ ಮೇಲಿರುವ ಭುವನೇಶ್ವರಿ ದೇವಿಯ ದರ್ಶನಕ್ಕಾಗಿ ಬುಧವಾರ ಬೆಳಗ್ಗೆ ಪಾದಯಾತ್ರೆಯ ಮೂಲಕ ಆಗಮಿಸಿದ ಶಾಸಕರು, ದೇವಿಯ ದರ್ಶನ ಪಡೆದು ಪೂಜೆ, ಅಭಿಷೇಕ ಹಾಗೂ ಮಂಗಳಾರತಿ ನೆರವೇರಿಸಿದ ಬಳಿಕ ಮಾತನಾಡಿದರು.

ದುಷ್ಟರನ್ನು ಶಿಕ್ಷಿಸಿ, ಸಜ್ಜನರನ್ನು ರಕ್ಷಿಸಲು ಜಗದೊಡತಿ ದೇವಿ ಸದಾ ಜಾಗೃತಳಾಗಿದ್ದಾಳೆ. ಬೆಟ್ಟದ ಮೇಲಿರುವ ಭುವನೇಶ್ವರಿ ತಾಯಿಯೂ ಸದಾ ಜಾಗೃತಳಾಗಿದ್ದು, ಭಕ್ತರ ಪಾಲಿಗೆ ಶಕ್ತಿಯ ಸೆಲೆಯಾಗಿದ್ದಾಳೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು. ಈ ಸಂದರ್ಭದಲ್ಲಿ ಕಂದಕೂರ ಕುಟುಂಬದ ಸದಸ್ಯರೂ ಉಪಸ್ಥಿತರಿದ್ದು, ದೇವಿಯ ದರ್ಶನ ಪಡೆದರು.

ಶಾಸಕರು ಆಗಮಿಸುತ್ತಿದ್ದಂತೆ ದೇವಸ್ಥಾನದ ಸಮಿತಿ ಸದಸ್ಯರು ಹಾಗೂ ಅರ್ಚಕರು ಅವರನ್ನು ಸ್ವಾಗತಿಸಿದರು. ನೂರಾರು ಯುವಕರು ಶಾಸಕರೊಂದಿಗೆ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆದು, ವಾಪಸ್ ಇಳಿಯುವಾಗಲೂ ಜೊತೆಯಲ್ಲಿದ್ದು, ದೇವಿಯ ಹೆಸರಿನಲ್ಲಿ ಘೋಷಣೆಗಳನ್ನು ಕೂಗಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor