ಯಾದಗಿರಿ | ದೇವಸ್ಥಾನ ದರ್ಶನದಿಂದ ಮನಸ್ಸಿಗೆ ಸಂತೋಷ ಲಭಿಸಲಿದೆ : ಸಿದ್ದರಾಮಾನಂದಪುರಿ ಶ್ರೀ
ಸುರಪುರ : ಪ್ರತಿಯೊಬ್ಬ ಮನುಷ್ಯನಿಗೆ ಧಾರ್ಮಿಕತೆ ಮತ್ತು ಧಾರ್ಮಿಕ ಆಚರಣೆ ಎನ್ನುವುದು ಮುಖ್ಯವಾಗಿದೆ. ಯಾವುದೇ ದೇವಸ್ಥಾನದ ದರ್ಶನ ಮಾಡಿದಲ್ಲಿ ಮನಸ್ಸಿಗೆ ಸಂತೋಷ ಉಂಟು ಮಾಡುತ್ತದೆ ಎಂದು ತಿಂಥಣಿ ಕನಕ ಗುರುಪೀಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಭೀರಲಿಂಗೇಶ್ವರ ದೇವಸ್ಥಾನದ ಲೋಕಾರ್ಪಣೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಏಳು ಪಲ್ಲಕ್ಕಿಗಳ ಉತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಯಾವುದೇ ದೇವಸ್ಥಾನ ಮತ್ತು ಮಠಗಳು ಧಾರ್ಮಿಕ ಕಾರ್ಯಕ್ಕೆ ಮಾತ್ರ ಸೀಮಿತವಾಗಿರದೆ, ಮನುಷ್ಯನಿಗೆ ಸಂಸ್ಕಾರ ಕಲಿಸುವ ಶ್ರದ್ಧಾ ಕೇಂದ್ರಗಳಾಗಿವೆ. ಇಂದು ಜಾಲಿಬೆಂಚಿ ಗ್ರಾಮದಲ್ಲಿ ಭೀರದೇವರ ದೇವಸ್ಥಾನ ಉದ್ಘಾಟನೆಗೊಳ್ಳುವ ಮೂಲಕ ನಿತ್ಯವು ಎಲ್ಲರಿಗೂ ಭೀರದೇವರು ದರ್ಶನ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ, ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದ ಮಹಾಸ್ವಾಮಿಜಿ, ಲಕ್ಷ್ಮಿಪುರದ ಶ್ರೀಗಿರಿಮಠದ ಡಾ.ಚನ್ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ಮಾತನಾಡಿದರು.
ಯೂತ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ನಿಖಿಲ ವಿ, ಶಂಕರ್ ಕಾರ್ಯಕ್ರಮ ಉದ್ಘಾಟಿಸಿದರು, ಮಾಲಳ್ಳಿ ಕೆಂಚರಾಯ ಪೂಜಾರಿ, ದೇವರಗೋನಾಲ ಅಯ್ಯಾಳಲಿಂಗೇಶ್ವರ ದೇವ ಸ್ಥಾನದ ಸಕ್ರೆಪ್ಪ ಮುತ್ಯಾ ರಾಮಲಿಂಗೇಶ್ವರ ಶರಣರು, ಕಾಂಗ್ರೆಸ್ ಮುಖಂಡ ರಾಜಾ ಸಂತೋಷ ಕುಮಾರ ನಾಯಕ, ವೆಂಕೋಬ ಯಾದವ್ ಮಂಗಳೂರು, ಪ್ರಕಕುಸ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರು, ವಿಶ್ವನಾಥ ನೀಲಳ್ಳಿ, ಮಾವಿನಮಟ್ಟಿ ನಿಂಗಣ್ಣ ಪೂಜಾರಿ, ಮಲ್ಲಿಭಾವಿ ಮಾಳಿಂಗರಾಯ ಪೂಜಾ ರಿ, ಮಾಚಗುಂಡಾಳ ಹೊನ್ನಪ್ಪ ಪೂಜಾರಿ, ತಹಸೀಲ್ದಾರ ಹೆಚ್.ಎ. ಸರಕಾವಸ್, ತಾಪಓ ಇಒ ಬಸವರಾಜ ಸಜ್ಜನ್, ಮಹೇಶ ಯಾದವ್ ಸೇರಿದಂತೆ ಇತರರಿದ್ದರು ವಾಸು ಕವಾತಿ ಸ್ವಾಗಿತಿಸಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ, ನಿರೂಪಿಸಿದರು. ಪ್ರಕಾಶ ಕವಾತಿ ವಂದಿಸಿದರು.
ಇದೇ 19 ರಂದು ತಾಲೂಕು ಆಡಳಿತ ನಿಮ್ಮ ಗ್ರಾಮದಲ್ಲಿ ಇಡೀ ದಿನ ಇದ್ದು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿದೆ. ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸುವ ಕಾರ್ಯ ಮಾಡಲಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು.
- ನಾಗಲಕ್ಷ್ಮೀ ಎನ್. ಚೌದ್ರಿ ಮಹಿಳಾ ಆಯೋಗದ ಅಧ್ಯಕ್ಷರು