×
Ad

ಮಂಜನಾಡಿ: ಸಾದಾತುಗಳಿಗೆ ಕಿಟ್ ವಿತರಣೆ

Update: 2025-08-30 18:47 IST

ಮಂಜನಾಡಿ: ಮಂಜನಾಡಿಯ ಅಲ್-ಮದೀನ ದುಬೈ ಸಮಿತಿ, ಶರಫುಲ್ ಉಲಮಾ ಮೆಮೋರಿಯಲ್ ಸಾದಾತ್ ರಿಲೀಫ್ ಫೌಂಡೇಶನ್ ವತಿಯಿಂದ ಸಾದಾತುಗಳಿಗೆ ಕಿಟ್ ವಿತರಣಾ ಕಾರ್ಯಕ್ರಮವು ಮಂಜನಾಡಿ ಅಲ್ ಮದೀನ ವಠಾರಲ್ಲಿ ನಡೆಯಿತು.

ಅಲ್ ಮದೀನ ದಅವಾ ಕಾಲೇಜಿನ ಪ್ರಾಂಶುಪಾಲ ಹುವೈಸ್ ತಂಳ್ ದುಆ ನೆರವೇರಿಸಿದರು. ಅಲ್-ಮದೀನ ಮಹಿಳಾ ಕಾಲೇಜಿನ ಪ್ರಾಂಶುಪಾಲ ಮುನೀರ್ ಕಾಮಿಲ್ ಸಖಾಫಿ ದಿಕ್ಸೂಚಿ ಭಾಷಣಗೈದರು.

ಅಲ್- ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅಲ್- ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ನಿರ್ದೇಶಕ ಮುಹಮ್ಮದ್ ಅಂಜಾದಿ, ಅಲ್ ಮದೀನ ದುಬೈ ಸಮಿತಿ ಸದಸ್ಯ ಇಕ್ಬಾಲ್ ಪೊಟ್ಟೋಳಿಕೆ, ಸುಹೈಲ್ ತಂಳ್ ಮಾಡೂರು, ಸಯ್ಯದ್ ಅಬ್ದುಲ್ ರಹ್ಮಾನ್ ಪಾಂಡವರ ಕಲ್ಲು, ಅಬ್ದುಲ್ ರಹ್ಮಾನ್ ಸಅದಿ ಕಡಂಬರ್, ಸುಬ್ಬಗೋಳಿ ಮಸೀದಿಯ ಅಧ್ಯಕ್ಷ ಮುಹಮ್ಮದ್ ಹಾಜಿ, ಮಂಜನಾಡಿ ಗ್ರಾಪಂ ಸದಸ್ಯ ಕುಂಞಿಬಾವ ಹಾಜಿ, ಅಬ್ದುಲ್ ರಝಾಕ್ ಮಾಸ್ಟರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News