×
Ad

ಮಂಗಳೂರು| ಜಿಎಸ್‌ಟಿ ಸುಧಾರಣೆಗಳು 2.0: ವಿಚಾರ ಸಂಕಿರಣ

Update: 2025-12-17 22:24 IST

ಮಂಗಳೂರು, ಡಿ.17: ‘ಜಿಎಸ್‌ಟಿ ಸುಧಾರಣೆಗಳು 2.0, ಜಿಎಸ್‌ಟಿಆರ್-9 ಫೈಲಿಂಗ್ ಮತ್ತು ಜಿಎಸ್‌ಟಿಯಲ್ಲಿನ ಇತರ ಇತ್ತೀಚಿನ ಬದಲಾವಣೆಗಳು’ ಕುರಿತು ವಿಚಾರಸಂಕಿರಣವನ್ನು ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಆಶ್ರಯದಲ್ಲಿ ನಗರದ ಬಂದರ್‌ನ ಕೆಸಿಸಿಐ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಕೆಸಿಸಿಐ ಪರೋಕ್ಷ ತೆರಿಗೆ ಸಮಿತಿಯ ಅಧ್ಯಕ್ಷರಾದ ಸಿಎ ಕೇಶವ ಎನ್. ಬಳ್ಳಕುರಾಯ ಅವರು ‘ಜಿಎಸ್‌ಟಿ 2.0 ಹೆಚ್ಚು ನಾಗರಿಕ-ಕೇಂದ್ರಿತ, ವ್ಯವಹಾರ-ಸ್ನೇಹಿ ಮತ್ತು ಸರಳೀಕೃತ ತೆರಿಗೆ ಆಡಳಿತದತ್ತ ಬದಲಾವಣೆಯನ್ನು ಸೂಚಿಸುತ್ತದೆ’ ಎಂದು ವಿವರಿಸಿದರು

ಸಿಎ ಸಬಾನಾ ಅವರು 56ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಪ್ರಮುಖ ಶಿಫಾರಸುಗಳನ್ನು ಮತ್ತು ಜಿಎಸ್‌ಟಿ ಸುಧಾರಣೆಗಳು , ಜಿಎಸ್‌ಟಿ ದರಗಳ ಪ್ರಸ್ತಾವಿತ ಸರಳೀಕರಣ ಮತ್ತು ಅನುಷ್ಠಾನದ ಸಮಯದ ಬಗ್ಗೆ ತಿಳಿಸಿದರು.

ಸಿಎ ಶ್ರದ್ಧಾ ಸಾಂಘ್ವಿ ಅವರು ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಯ ಕಾರ್ಯಾಚರಣೆಯನ್ನು ಅವರು ವಿವರಿಸಿದರು. ಕೆಸಿಸಿಐ ಖಜಾಂಚಿ ಸಿಎ ಅಬ್ದುರ‌್ರಹಿಮಾನ್ ಮುಸ್ಬಾ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್ ಸ್ವಾಗತಿಸಿ ಲೆಕ್ಕಪತ್ರ ವೃತ್ತಿಪರರ ಜ್ಞಾನವನ್ನು ನವೀಕರಿಸುವಲ್ಲಿ ಇಂತಹ ವಿಚಾರ ಸಂಕಿರಣಗಳ ಅಗತ್ಯತೆಯ ಬಗ್ಗೆ ತಿಳಿಸಿದರು. ಕಾರ್ಯದರ್ಶಿ ಅಶ್ವಿನ್ ಪೈ ಮಾರೂರ್ ವಂದಿಸಿದರು. 




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News