ಮಂಜನಾಡಿ ಉರೂಸ್ ಉದ್ಘಾಟನೆ
ಮಂಜನಾಡಿ: ನಮ್ಮ ಜೀವನದಲ್ಲಿ ಉತ್ತಮ ಕಾರ್ಯ ಚಟುವಟಿಕೆಗಳು ಆಗಬೇಕು. ಶಿಕ್ಷಣ ಎಂಬುದು ಅಭಿವೃದ್ಧಿ ಗೆ ಇರುವ ದಾರಿಯಾಗಿದ್ದು, ಇದಕ್ಕೆ ಒತ್ತು ನೀಡಬೇಕು ಎಂದು ಉಡುಪಿ ಖಾಝಿ ಅಬ್ದುಲ್ ಹಮೀದ್ ಮಾಣಿ ಉಸ್ತಾದ್ ಅಭಿಪ್ರಾಯ ಪಟ್ಟರು.
ಅವರು ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಅಸಯ್ಯಿದ್ ಇಸ್ಮಾಯಿಲ್ ವಲಿಯುಲ್ಲಾ ಅಲ್ ಬುಖಾರಿ ಅವರ ಹೆಸರಿನಲ್ಲಿ ಮಸೀದಿಯ ಗೌರವ ಅಧ್ಯಕ್ಷ ಸೈಯದ್ ಆಟಕೋಯ ತಂಙಳ್ ಕುಂಬೋಳ್ ಅವರ ಅಧ್ಯಕ್ಷತೆಯಲ್ಲಿ
11 ದಿನಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ,ದುಆ ಆಶೀರ್ವಚನ ನೀಡಿ ಮಾತನಾಡಿದರು.
ನಮ್ಮ ಜೀವನ ಯಾವಾಗ ಕೊನೆ ಎಂದು ಹೇಳಲು ಸಾಧ್ಯವಿಲ್ಲ. ಬದುಕಿರುವಷ್ಟು ದಿನ ನಾವು ಉತ್ತಮ ಹಾದಿಯಲ್ಲಿ ಸಾಗಬೇಕು.ಇಸ್ಲಾಮಿನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಸಯ್ಯಿದ್ ವಿ.ಪಿ.ಎ.ಅಬ್ದುಲ್ ರಹ್ಮಾನ್ ತಂಙಳ್ ದಾರಿಮಿ ಆಟೀರಿ , ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ, ಧಾರ್ಮಿಕ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮ ದಲ್ಲಿ ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಸಹಾಯಕ ಮುದರ್ರಿಸ್ ಮೊಹಮ್ಮದ್ ಮಸೂದ್ ಸಅದಿ, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಕಲ್ಕಟ್ಟ ಮಸೀದಿ ಖತೀಬ್ ಇಸ್ಹಾಕ್ ಸಖಾಫಿ, ಸದ್ ರ್ ಮೊಹಮ್ಮದ್ ಸ ಈ ದ್ ಸಅದಿ, ಇರ್ಷಾದ್ ರಝ್ವಿ,ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮೈಸೂರು ಬಾವ, ಉಪಾಧ್ಯಕ್ಷರಾದ ಆಲಿಕುಂಞಿ ಪಾರೆ,ಮೊಯ್ದಿನ್ ಕುಟ್ಟಿ, ಮುನೀರ್ ಬಾವ, ಕೋಶಾಧಿಕಾರಿ ಉಮರ್ ಕುಂಞಿ ಮೋರ್ಲ, ಕಾರ್ಯದರ್ಶಿ ಗಳಾದ ಹಮೀದ್ ಆರಂಗಡಿ, ಬಾಪಕುಂಞಿ, ಕುಂಞಿ ಬಾವ ಕಟ್ಟೆಮಾರ್, ಇಬ್ರಾಹಿಂ ಅಹ್ಸನಿ,ಎ.ಎಂ.ಇಬ್ರಾಹೀಂ, ಟಿ.ಮೊಹಮ್ಮದ್, ಅಬ್ದುಲ್ ರಹ್ಮಾನ್ ರಝ್ವಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಸಲಾಮ್ ಮದನಿ ಕಾರ್ಯಕ್ರಮ ನಿರೂಪಿಸಿದರು.