ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಇನಾಯತ್ ಅಲಿ
ಮಂಗಳೂರು, ಡಿ.17: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಕೈಕಂಬ-ಪೊಳಲಿ ದ್ವಾರದ ಬಳಿ ಇರುವ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಕಚೇರಿಯಲ್ಲಿ ಡಿ. 17ರಂದು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಭೂ-ವಿವಾದ, ರಸ್ತೆ ವಿವಾದ, ಅತಿಕ್ರಮಣ, ಆರೋಗ್ಯ ಸಮಸ್ಯೆ, ನೀರು, ಚರಂಡಿ ಸಮಸ್ಯೆ ಮತ್ತಿತರ ಸಮಸ್ಯೆಗಳ ಬಗ್ಗೆ ದೂರು ನೀಡಿದ ಕೆಲವರು ಪಂಚಾಯತ್, ಸರಕಾರಿ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಇದೇ ವೇಳೆ ಕೆಲವರು ತಮ್ಮ ಕಷ್ಟದ ಜೀವನಕ್ಕೆ ನೆರವಾಗು ವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಇನಾಯತ್ ಅಲಿ ಮಾತನಾಡಿ, ‘ನೀವು ನನ್ನ ಮೇಲಿಟ್ಟ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಸರಕಾರದ ಇಲಾಖೆ, ಸಚಿವರೊಂದಿಗೆ ಚರ್ಚಿಸಿ ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದವರು, ಕೆಲವು ಅರ್ಜಿಗಳಿಗೆ ಸಂಬಂಧಿಸಿ ಅಧಿಕಾರಿಗಳಿಗೆ ಕರೆ ಮಾಡಿ ಮಾತುಕತೆ ನಡೆಸಿದರು.
ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಕಾಂಗ್ರೆಸ್ ಪ್ರಮುಖರಾದ ಕೃಷ್ಣ ಅಮೀನ್, ಮಾಲತಿ ಗಂಜಿಮಠ, ಗಿರೀಶ್ ಆಳ್ವ, ಪ್ರಥ್ವೀರಾಜ್ ಆರ್. ಕೆ, ಸುನಿಲ್ ಜಿ, ಜಿ. ಮುಹಮ್ಮದ್ ಉಂಞ, ಪುರುಷೋತ್ತಮ ಮಲ್ಲಿ, ಹರೀಶ್ ಭಂಡಾರಿ, ದಯಾನಂದ ಶೆಟ್ಟಿ ಕುಪ್ಪೆಪದವು, ಟಿ. ಹನೀಫ್, ಅಬ್ದುಲ್ ಅಝೀಝ್ ಕಂದಾವರ, ಜಯಲಕ್ಷ್ಮೀ ಅಡ್ಡೂರು, ಶೋಭಾ ಗುರುಪುರ, ಯಶವಂತ ಶೆಟ್ಟಿ ಗುರುಪುರ, ಚಂದ್ರಶೇಖರ ಬಿ. ಪೂಜಾರಿ, ಜಯಂತಿ ಡಿ. ಅಮೀನ್ ತಿರುವೈಲು, ಬಾಷಾ ಮಾಸ್ಟರ್, ಕಲ್ಲಾಡಿ ಅಬೂಬಕ್ಕರ್ ಕುಪ್ಪೆಪದವು, ಹಸನ್ ಬಾವಾ, ತೌಶೀಫ್ ಅಡ್ಡೂರು, ರಝಾಕ್ ಕುಪ್ಪೆಪದವು, ಅಶ್ರಫ್ ಬಿತ್ತುಪಾದೆ ಮತ್ತಿತರರು ಇದ್ದರು.