ಯುವಕ ನಾಪತ್ತೆ
Update: 2025-09-02 22:02 IST
ಮಂಗಳೂರು, ಸೆ.2: ಮೂಲತಃ ವಿಜಯನಗರ ಜಿಲ್ಲೆಯ ಹರಪ್ಪನ ಹಳ್ಳಿ ನಿವಾಸಿ ಪ್ರಸಕ್ತ ನಗರದ ಜಪ್ಪಿನಮೊಗರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ಸಹೋದರನೊಂದಿಗೆ ವಾಸವಾಗಿದ್ದ ಮಲ್ಲಿ ಮಂಜಪ್ಪ (35) ಎಂಬವರು ನಾಪತ್ತೆಯಾಗಿದ್ದಾರೆ.
ನಗರದ ಕೆಲವು ಆಸ್ಪತ್ರೆ ಮತ್ತು ಮನೆಗಳಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಲ್ಲಿ ಮಂಜಪ್ಪ ಜಪ್ಪಿನ ಮೊಗರುವಿನ ಬಾಡಿಗೆ ಮನೆಯಿಂದ ಹೋಮ್ ನರ್ಸ್ ಕೆಲಸ ಇದೆ ಎಂದು ಹೇಳಿ ಹೋಗಿದ್ದಾರೆ. ಆ.8ರ ಬಳಿಕ ಕಾಣೆಯಾಗಿದ್ದು, ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ಮಂಜಪ್ಪರ ಸಹೋದರ ದಂಡೆಪ್ಪ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.