ಎಸ್‌ಐಒ ವತಿಯಿಂದ ಮಾದರಿ ಶಿಕ್ಷಕ ಪೈಗಂಬರ್ ಮುಹಮ್ಮದ್ ಅಭಿಯಾನಕ್ಕೆ ಚಾಲನೆ
Update: 2025-09-04 22:14 IST
ಮಂಗಳೂರು, ಸೆ.4: ಪ್ರವಾದಿ ಮುಹಮ್ಮದ್ (ಸ)ರ ಜನ್ಮ ತಿಂಗಳ ಪ್ರಯುಕ್ತ ಎಸ್‌ಐಒ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಮಾದರಿ ಶಿಕ್ಷಕ ಪೈಗಂಬರ್ ಮುಹಮ್ಮದ್ (ಸ) ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಈ ಸಂದರ್ಭ ಜಮಾಅತೆ ಇಸ್ಲಾಮಿ ಹಿಂದ್ ದ.ಕ ಜಿಲ್ಲೆ ಉತ್ತರದ ಅಧ್ಯಕ್ಷ ಇಸಾಕ್ ಪುತ್ತೂರು, ಎಸ್‌ಐಒ ಜಿಲ್ಲಾ ಕಾರ್ಯದರ್ಶಿ ಹುಸೈನ್ ಹುಸೇನ್, ರಾಜ್ಯ ಸಲಹಾ ಸಮಿತಿಯ ಸದಸ್ಯ ಝಮೀರ್ ಉಪಸ್ಥಿತರಿದ್ದರು.