ಮಡಿಕೇರಿ: ನಾಗರಿಕ ಸೇವೆಗಳ ಕೋರ್ಸ್‌ಗಳ ಪಾತ್‌ವೇ ಮತ್ತು ನೇವಿಗೇಟರ್ ಪುಸ್ತಕ ಬಿಡುಗಡೆ
ಮಡಿಕೇರಿ, ಸೆ.4: ನಾಗರಿಕ ಸೇವೆಗಳ ಕೋರ್ಸ್ ಆರಂಭಿಸಿರುವ ಮಡಿಕೇರಿಯ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ನಾಗರಿಕ ಸೇವೆಗಳ ಕೋರ್ಸ್‌ಗಳ ಪಾತ್‌ವೇ ಮತ್ತು ನೇವಿಗೇಟರ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಜಿಪಂ ಉಪ ಕಾರ್ಯದರ್ಶಿ ಚಂದ್ರಶೇಖರ್ ನಾಗರಿಕ ಸೇವೆಗಳ ಪಾತ್‌ವೇ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಪ್ರತಿಷ್ಠಿತ ನಾಗರಿಕ ಸೇವೆಗಳ ಆಕಾಂಕ್ಷೆಯನ್ನು ಹೊಂದಬೇಕು. ಚಿಕ್ಕ ವಯಸ್ಸಿನಿಂದಲೇ ನಾಯಕತ್ವ, ಶಿಸ್ತು ಮತ್ತು ಸಾರ್ವಜನಿಕ ಸೇವೆಗೆ ಬದ್ಧತೆಯ ಮನೋಭಾವವನ್ನು ಬೆಳೆಸಿ ಕೊಳ್ಳಬೇಕು ಎಂದರು.
ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಕೇಂದ್ರ ಸಮಿತಿ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಕೊಡಗಿನ ಮೀಫ್ ಕಾರ್ಯದರ್ಶಿ ಬಶೀರ್, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಮೀಫ್ ಕೇಂದ್ರ ಸಮಿತಿಯ ಉಪಾಧ್ಯಕ್ಷ ಮುಸ್ತಫಾ, ಮೀಫ್ ಬೆಳ್ಳಿ ಮಹೋತ್ಸವ ಸಮಿತಿಯ ಅಧ್ಯಕ್ಷ ಇಕ್ಬಾಲ್, ಉಮ್ಮತ್ ಒನ್ ಕೊಡಗು ಟ್ರಸ್ಟಿ ಸಲೀಂ, ಪತ್ರಕರ್ತ ಶಾಲೆಯ ಪೋಷಕ ಶಿಕ್ಷಕ ಸಂಘದ ಅಧ್ಯಕ್ಷ ಗಿರೀಶ್, ಕ್ರೆಸೆಂಟ್ ಶಾಲಾ ಕಾರ್ಯದರ್ಶಿ ಮುಹಮ್ಮದ್ ಹನೀಫ್, ನಿರ್ದೇಶಕ ಮುಹಮ್ಮದ್ ಇಸ್ಮಾಯಿಲ್ ಉಪಸ್ಥಿತರಿದ್ದರು.
ಎಎಲ್‌ಜಿ ಕ್ರೆಸೆಂಟ್ ಶಾಲೆಯ ಪ್ರಾಂಶುಪಾಲ ಜಾಯ್ಸಿ ವಿನಯಾ ಸ್ವಾಗತಿಸಿದರು. ಸುಲ್ಹತ್ ವಂದಿಸಿದರು. ಬೀನಾ ಕಾರ್ಯಕ್ರಮ ನಿರೂಪಿಸಿದರು.