ಮೀಫ್ ವತಿಯಿಂದ ಉಚಿತ ನೀಟ್ ರಿಪೀಟರ್ಸ್, ಅರ್ಹ ಮುಸ್ಲಿಂ ವಿದ್ಯಾರ್ಥಿಗಳಿಗೆ ಸಿಇಟಿ ಸ್ಕಾಲರ್‌ಶಿಪ್
Update: 2025-09-15 22:34 IST
ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ವತಿಯಿಂದ ನೀಟ್ ಮೂಲಕ ವೈದ್ಯಕೀಯ ಸೀಟು ಕೈ ತಪ್ಪಿದ ಕಾರಣ ನೀಟ್ ರಿಪೀಟರ್ಸ್ ಕೊರ್ಸ್ ಮಾಡಲು ಆಸಕ್ತಿ ಹೊಂದಿರುವ ಬಡ ಮುಸ್ಲಿಂ ವಿದ್ಯಾರ್ಥಿ ಗಳಿಗೆ ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದು ವರ್ಷದ ನೀಟ್ ರಿಪೀಟರ್ಸ್ ಕೋರ್ಸ್ ಮಾಡಲು ಉಚಿತ ಅವಕಾಶ ಕಲ್ಪಿಸಲಾಗಿದೆ.
ಅದಲ್ಲದೆ ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸರಕಾರಿ ಕೋಟಾದಲ್ಲಿ ವೃತ್ತಿಪರ ಶಿಕ್ಷಣಕ್ಕೆ ಸೀಟು ಪಡೆದ ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ಗರಿಷ್ಠ 25,000 ರೂ. ವಿದ್ಯಾರ್ಥಿವೇತನ ನೀಡುವ ವಿಚಾರದಲ್ಲಿ ಅರ್ಜಿಗಳನ್ನು ಆಹ್ವಾನಿಸುವ ಕೊನೆಯ ದಿನಾಂಕವನ್ನು ಸೆ.26ರವರೆಗೆ ವಿಸ್ತರಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ನಿಗದಿತ ನಮೂನೆಯಲ್ಲಿ ದಾಖಲೆಯೊಂದಿಗೆ ಮೀಫ್ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಮೊ.ಸಂ: 8792115666ನ್ನು ಸಂಪರ್ಕಿಸಬಹುದು ಎಂದು ಮೀಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.