×
Ad

ಮಂಗಳೂರು: ಮೀಫ್ ಶಿಕ್ಷಕರ ಕಾರ್ಯಾಗಾರದ ಸಮಾರೋಪ

Update: 2025-09-18 18:21 IST

ಮಂಗಳೂರು, ಸೆ.18: ಮಂಗಳೂರು ಬ್ಯಾರಿಸ್ ಪಬ್ಲಿಕ್ ಸ್ಕೂಲ್ ಹ್ಯಾಟ್‌ಹಿಲ್‌ನಲ್ಲಿ ಕುಂದಾಪುರ ಬ್ಯಾರಿಸ್ ಬಿ.ಎಡ್. ಕಾಲೇಜಿನ ಆಶ್ರಯದಲ್ಲಿ ಒಂದು ವಾರದಿಂದ ನಡೆಯುತ್ತಿದ್ದ ಬಿ.ಎಡ್‌ಯೇತರ ಮೀಫ್ ಶಾಲಾ ಶಿಕ್ಷಕರ ಕಾರ್ಯಾ ಗಾರದ ಸಮಾರೋಪ ಸಮಾರಂಭ ಸೆ.17ರಂದು ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೋಡಿ ಕುಂದಾಪುರ ಬ್ಯಾರಿಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಅಧ್ಯಕ್ಷ ಅಬ್ದುಲ್ ರಹ್ಮಾನ್ ಬ್ಯಾರಿ ಮತ್ತು ಬ್ಯಾರಿಸ್ ಇನ್‌ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್ ಇನೋಳಿಯ ಪ್ರಾಂಶುಪಾಲ ಡಾ. ಅಝೀಝ್ ಮುಸ್ತಫ ಭಾಗವಹಿಸಿದ್ದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಎಳೆಯ ವಯಸ್ಸಿನಲ್ಲಿಯೇ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕಾರ್ಯಾಗಾರದ ಅತ್ಯುತ್ತಮ ಶಿಕ್ಷಕಿಯಾಗಿ ಆಯ್ಕೆಯಾದ ಫಳ್ನೀರ್ ಮಿಲ್ಲತ್ ಪಬ್ಲಿಕ್ ಸ್ಕೂಲ್‌ನ ಶಿಕ್ಷಕಿ ಶಮೀನ ಅವರು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿ.ಎಡ್ ಕಾಲೇಜಿನ ಎಲ್ಲಾ ಶಿಕ್ಷಕ ವೃಂದದವರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಬ್ಯಾರಿಸ್ ಕಾಲೇಜ್ ಆಫ್ ಎಜುಕೇಶನ್ ಕೋಡಿ, ಕುಂದಾಪುರ ಇವರು ಪ್ರಾಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಮೀಫ್ ಉಪಾಧ್ಯಕ್ಷ ಕೆ.ಎಂ. ಮುಸ್ತಫ ಸುಳ್ಯ, ಸದಸ್ಯರಾದ ಅಬ್ದುಲ್ ರಝಾಕ್ ಗೋಳ್ತ್ತಮಜಲ್, ಬಿ.ಎಡ್ ಕಾಲೇಜು ಪ್ರಿನ್ಸಿಪಾಲ್ ಡಾ. ಫಿರ್ದೋಸ್, ಬಿ.ಪಿ.ಎಸ್. ಪ್ರಿನ್ಸಿಪಾಲ್ ಖತೀಜತುಲ್ ಕುಬ್ರ ಭಾಗವಹಿಸಿದ್ದರು.

ಮೀಫ್ ಉಪಾಧ್ಯಕ್ಷರಾದ ಪರ್ವೇಝ್ ಅಲಿ ಸ್ವಾಗತಿಸಿ, ಕಾರ್ಯದರ್ಶಿ ಅನ್ವರ್ ಹುಸೈನ್ ವಂದಿಸಿದರು. ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ. ಕಾರ್ಯಕ್ರಮ ನಿರೂಪಿಸಿದರು. ಏಳು ದಿನಗಳ ತರಬೇತಿಯಲ್ಲಿ ಒಟ್ಟು 40 ವಿದ್ಯಾಸಂಸ್ಥೆಗಳ ಶಿಕ್ಷಕರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News