×
Ad

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ

Update: 2025-09-19 21:05 IST

ಮಂಗಳೂರು, ಸೆ.19: ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ರಕ್ಷಣೆ ನೀಡುವ ಉದ್ದೇಶದಿಂದ ರೂಪಿಸಲಾದ ಪೊಕ್ಸೊ ಕಾಯ್ದೆ (ಕುರಿತು ಜಾಗೃತಿ ಕಾರ್ಯಕ್ರಮವು ಗುರುವಾರ ಮಂಗಳೂರು ಉರ್ವಾ ಲೇಡಿಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆಯಿತು.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮೋಹನ ಜೆ.ಎಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ವಕೀಲ ಕೆ. ನಿಕೇಶ್ ಶೆಟ್ಟಿ ಜಾಗೃತಿ ಉಪನ್ಯಾಸ ನೀಡಿದರು.

ಸಹಾಯಕ ಕಾನೂನು ರಕ್ಷಣಾ ವಕೀಲ ಕಿರಣ್, ಲೇಡಿಹಿಲ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲೆ ಭಗಿನಿ ಜೆನಿಫರ್ ಮೋರಾಸ್, ಲೇಡಿಹಿಲ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ಮ್ಯಾಗ್ದಲಿನ್, ಲೇಡಿಹಿಲ್ ಪಪೂ ಕಾಲೇಜಿನ ಪ್ರಾಂಶುಪಾಲೆ ಭಗಿನಿ ಶರ್ಮಿಳಾ ಉಪಸ್ಥಿತರಿದ್ದರು.

ಸಹಾಯಕ ಶಿಕ್ಷಕಿಯರಾದ ನವೋಮಿ ಸ್ವಾಗತಿಸಿದರು. ಕೀರ್ತಿ ವಂದಿಸಿದರು. ಪೊಕ್ಸೊ ಸಮಿತಿಯ ಸಂಯೋಜಕಿ ಎಲಿಜಬೆತ್ ಪಿ.ಡಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News