ಡಿ.20 ರಂದು ಜಮೀಯ್ಯತ್ತುಲ್ ಫಲಾಹ್ ವತಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ
Update: 2025-12-17 00:17 IST
ಮಂಗಳೂರು: ಜಮೀಯ್ಯತ್ತುಲ್ ಫಲಾಹ್ ದ. ಕ. ಮತ್ತು ಉಡುಪಿ ಜಿಲ್ಲೆ ಇದರ ಸುಳ್ಯ ಘಟಕದ ವತಿಯಿಂದ ಡಿಸೆಂಬರ್ 20 ರಂದು ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ನಡೆಯಲಿರುವ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಮತ್ತು ಮಾದಕ ವ್ಯಸನಗಳ ವಿರುದ್ಧ ಜನ ಜಾಗೃತಿ ಅಭಿಯಾನದ ಆಹ್ವಾನ ಪತ್ರ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿರುವ ಜಮೀಯ್ಯತ್ತುಲ್ ಫಲಾಹ್ ಕಚೇರಿಯಲ್ಲಿ ನಡೆಯಿತು.
ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜೆ.ಎಫ್. ಉಪಾಧ್ಯಕ್ಷರುಗಳಾದ ಅಬ್ದುಲ್ ಖಾದರ್ ಸಂಗಮ್, ಹಾಜಿ ಇಬ್ರಾಹೀಂ ಖತರ್, ಪ್ರಧಾನ ಕಾರ್ಯದರ್ಶಿ ಹಸೈನಾರ್ ವಳಲಂಬೆ ಜತೆ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ, ನಿರ್ದೇಶಕ ಎಸ್. ಪಿ. ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.