×
Ad

ಮೇಲ್ತೆನೆ ಪ್ರಶಸ್ತಿಗೆ ಗಾಯಕ ರಹೀಂ ಬಿ.ಸಿ.ರೋಡ್ ಆಯ್ಕೆ

Update: 2025-09-20 18:21 IST

ದೇರಳಕಟ್ಟೆ, ಸೆ.20: ಬ್ಯಾರಿ ಎಲ್ತ್‌ಕಾರ್-ಕಲಾವಿದಮಾರೊ ಕೂಟ (ಮೇಲ್ತೆನೆ) ದೇರಳಕಟ್ಟೆ ಇದರ ದಶಮಾನೋ ತ್ಸವದ ಪ್ರಯುಕ್ತ ನೀಡಲಾಗುವ ಱಮೇಲ್ತೆನೆೞ ಪ್ರಶಸ್ತಿಗೆ ಹಿರಿಯ ಗಾಯಕ, ಕಲಾವಿದ ರಹೀಂ ಬಿ.ಸಿ.ರೋಡ್ ಆಯ್ಕೆಯಾಗಿದ್ದಾರೆ. ಸೆಪ್ಟಂಬರ್ 30ರಂದು ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್‌ನಲ್ಲಿ ನಡೆಯುವ ಱಮೇಲ್ತೆನೆ ಪತ್ತನೆ ವರ್ಸತ್ತೆ ಜಲ್ಸ್-ಲೇಸ್ 2025 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. *ಪರಿಚಯ: ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಇನೋಳಿಯಲ್ಲಿ ಬೋಳಿಯಾರು ಅಬ್ದುಲ್ ಖಾದರ್-ಫರಂಗಿಪೇಟೆಯ ಉಮ್ಮಾತುಮ್ಮ ದಂಪತಿಯ ಪುತ್ರನಾಗಿ 1957ರಲ್ಲಿ ಜನಿಸಿದ ಅಬ್ದುಲ್ ರಹೀಂ ಯಾನೆ ಅದ್ದಾಮ ಇನೋಳಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 6ನೆ ಮತ್ತು ಮಡಿಕೇರಿಯ ಸರಕಾರಿ ಶಾಲೆಯಲ್ಲಿ 10ನೆ ತರಗತಿವರೆಗೆ ಕಲಿತರು.

ಎಳೆಯ ಪ್ರಾಯದಲ್ಲೇ ಹಾಡುವ ಅಭಿರುಚಿ ಹೊಂದಿದ್ದ ರಹೀಂ ಬಳಿಕ ಗಾಯನವನ್ನೇ ಬದುಕನ್ನಾಗಿಸಿಕೊಂಡರು. ಮದುವೆ, ಮುಂಜಿ ಸಹಿತ ಬೀಡಿ ಉದ್ಯಮದ ಪ್ರಚಾರಕ್ಕೆ ಸಂಬಂಧಿಸಿ ಬ್ಯಾರಿ, ತುಳು, ಕನ್ನಡದಲ್ಲಿ ಗೀತೆ ರಚಿಸಿದ್ದ ರಹೀಂ ಬಿ.ಸಿ.ರೋಡ್ ಸುಮಾರು 1 ಸಾವಿರಕ್ಕೂ ಅಧಿಕ ವೇದಿಕೆಗಳಲ್ಲಿ ಹಾಡಿದ್ದಾರೆ. ಕವಿಗೋಷ್ಠಿಯಲ್ಲಿ ಕವನ ವಾಚಿಸಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2010ನೆ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೂರಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ ಎಂದು ಮೇಲ್ತೆನೆಯ ಅಧ್ಯಕ್ಷ ವಿ.ಇಬ್ರಾಹೀಂ ನಡುಪದವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News