×
Ad

ಬಂಟ್ವಾಳ : ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Update: 2025-09-25 22:38 IST

ಬಂಟ್ವಾಳ : ಸಜಿಪಮೂಡ ಗ್ರಾಮದ ಕಂಡೂರು ನಿವಾಸಿ ಸದಾನಂದ (60) ಎಂಬವರು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಇವರು ಪತ್ನಿ ರೋಹಿಣಿ ಅವರು ಠಾಣೆಯಲ್ಲಿ ದೂರು ನೀಡಿದ್ದು, ಕಂಡೂರುನಲ್ಲಿ ಎಸ್.ಕೆ ಸುವರ್ಣ ಸೌಂಡ್ಸ್ & ಲೈಟಿಂಗ್ಸ್ ಅಂಗಡಿ ಹೊಂದಿದ್ದು ಸ.16 ರಂದು ಸಂಜೆ ತನ್ನ ಮೊಬೈಲ್ ನ್ನು ಮನೆಯ ಬಳಿ ಟೆಂಪೋದಲ್ಲಿ ಬಿಟ್ಟು ಮನೆಯಲ್ಲಿ ಹೇಳದೆ ಹೋಗಿದ್ದು ಈ ತನಕ ಮನೆಗೆ ವಾಪಸು ಬಾರದೆ ಕಾಣೆಯಾಗಿರುತ್ತಾರೆ.

60 ವರ್ಷ ಪ್ರಾಯದ ಸದಾನಂದ ಅವರು 170 ಸೆ ಮೀ ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು ಕಾಣೆಯಾದ ದಿವಸ ಬೂದು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶರ್ಟು ಧರಿಸಿರುತ್ತಾರೆ. ಹಿಂದಿ, ಕನ್ನಡ, ತುಳು ಭಾಷೆ ಮಾತನಾಡು ತ್ತಾರೆ ಎಂದು ತಿಳಿಸಿದ್ದಾರೆ.

ಮೇಲ್ಕಂಡ ವ್ಯಕ್ತಿಯ ಮಾಹಿತಿ ತಿಳಿದುಬಂದಲ್ಲಿ ಬಂಟ್ವಾಳ ನಗರ ಠಾಣೆಯ ದೂರವಾಣಿ ಸಂಖ್ಯೆ 08255 232111 ಅಥವಾ ದ.ಕ ಜಿಲ್ಲಾ ಕಂಟ್ರೋಲ್ ರೂಮ್ ಸಂಖ್ಯೆ 9480805300 ಗೆ ತಿಳಿಸುವಂತೆ ಬಂಟ್ವಾಳ ನಗರ ಠಾಣಾ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News