ಅಡ್ಕರೆಪಡ್ಪು: ಪೊಲೀಸರ ಜತೆ ಸಂವಾದ ಕಾರ್ಯಕ್ರಮ
ದೇರಳಕಟ್ಟೆ, ಸೆ.28: ಬೆಳ್ಮ ಗ್ರಾಮದ ಅಡ್ಕರೆಪಡ್ಪುವಿನ ಮುಹ್ಯಿದ್ದೀನ್ ಜುಮಾ ಮಸೀದಿ ಹಾಗೂ ರಹ್ಮಾನಿಯ ಮದ್ರಸದಲ್ಲಿ ಪ್ರವಾದಿ ಪೈಗಂಬರ್‌ರ ಜನ್ಮ ದಿನಾಚರಣೆಯ ಪ್ರಯುಕ್ತ ಪೊಲೀಸರ ಜತೆ ವಿಶೇಷ ಸಂವಾದ ನಡೆಯಿತು.
ಗಾಂಜಾ, ಆಫೀಮು, ಅಮಲು ಪದಾರ್ಥ, ಹದಿಹರೆಯದ ಬಾಲಕ ಬಾಲಕಿಯರ ವಾಹನ ಚಾಲನೆ, ಮಕ್ಕಳ ಮೇಲಿನ ದೌರ್ಜನ್ಯ ಇತ್ಯಾದಿ ವಿಷಯಗಳ ಬಗ್ಗೆ ಕೊಣಾಜೆ ಠಾಣೆಯ ಎಸ್ಸೈ ನಾಗರಾಜ ಎಸ್. ಮಾಹಿತಿ ನೀಡಿದರು.
ಈ ಸಂದರ್ಭ ಆರೋಗ್ಯ ಮತ್ತು ಆಹಾರ ತರಗತಿ, ಹಳೆ ವಿದ್ಯಾರ್ಥಿ ಸಂಗಮ, ಹಿರಿಯರ ಜತೆ ಸ್ನೇಹ ಸಂಗಮ, ಮದ್ರಸ ಮಕ್ಕಳ ಮೀಲಾದ್ ಸಂಗಮ, ಎಫ್.ಎ. ಬಾಕ್ಸ್ ಉದ್ಘಾಟನೆ, ಕೈಬರಹ ಮಾಸಿಕ ಬಿಡುಗಡೆ ಕಾರ್ಯ ಕ್ರಮಗಳು ನಡೆಯಿತು.
ಕೊಣಾಜೆ ಠಾಣೆಯ ಸಿಬ್ಬಂದಿ ಶರಣಪ್ಟ, ಮಸೀದಿಯ ಖತೀಬ್ ಮುಹಮ್ಮದ್ ಹಿಕಮಿ, ಮುಖ್ಯ ಶಿಕ್ಷಕ ಹನೀಫ್ ಸಅದಿ, ಶಿಕ್ಷಕರಾದ ಕೆ. ಎಚ್.ಇಸ್ಮಾಈಲ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಮದನಿ, ಜಮಾಅತ್ ಅಧ್ಯಕ್ಷ ಜಾಫರ್, ಕಾರ್ಯದರ್ಶಿ ಮುಸ್ತಫ, ಕೋಶಾಧಿಕಾರಿ ಮುಹಮ್ಮದ್, ಉಸ್ತುವಾರಿ ಎ.ಬಿ. ಹುಸೈನ್, ಉಪಾಧ್ಯಕ್ಷರಾದ ಅಬ್ದುಲ್ ಖಾದರ್, ಹೈದರ್, ಜತೆ ಕಾರ್ಯದರ್ಶಿಗಳಾದ ಅಬೂಬಕರ್, ಅಬ್ದುರ‌್ರವೂಫ್, ಅಬ್ದುಸ್ಸಲಾಂ, ಸದಸ್ಯರಾದ ಆದಂ ಮುಸ್ಲಿಯಾರ್, ಮುಹಮ್ಮದ್, ಅಬ್ಬಾಸ್ ಬಾಕಿಮಾರ್, ಮಸೀದಿ ನಿರ್ಮಾಣ ಸಮಿತಿಯ ಅಧ್ಯಕ್ಷ ಸಿದ್ದೀಕ್, ಉಪಾಧ್ಯಕ್ಷ ಅಬ್ದುರ‌್ರಹೀಂ, ವೈಸ್ ಕನ್ವೀನರ್ ನಿಯಾಝ್ ಉಪಸ್ಥಿತರಿದ್ದರು. ಶಿಕ್ಷಕ ಮುಹಮ್ಮದ್ ಮುಸ್ತಫ ಸಅದಿ ಹರೇಕಳ ಕಾರ್ಯಕ್ರಮ ನಿರೂಪಿಸಿದರು.