×
Ad

ದ.ಕ ವೆಸ್ಟ್ ಜಿಲ್ಲಾ ಮುಅಲ್ಲಿಂ ಮೆಹರ್ಜಾನ್ ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ

Update: 2025-10-01 20:22 IST

ಮಂಗಳೂರು: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ದ.ಕ ವೆಸ್ಟ್ ಜಿಲ್ಲಾ ಸಭೆ ಮಂಗಳೂರು ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು.

ರಾಜ್ಯ ಜೊತೆ ಕಾರ್ಯದರ್ಶಿ ಇಬ್ರಾಹಿಂ ನಯೀಮಿ ಸಭೆಯನ್ನು ಉದ್ಘಾಟಿಸಿದರು. ವೆಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಮಾತನಾಡಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಯ ನಿರ್ದೇಶನ ಪ್ರಕಾರ 'ಸಮಸ್ತ ಸೆಂಚ್ಯುನರಿ' ಪ್ರಯುಕ್ತ ನಡೆಸಲ್ಪಡುವ ಜಿಲ್ಲಾ ಮುಅಲ್ಲಿಂ ಸಮ್ಮೇಳನದ ಕರ್ನಾಟಕ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ಅ. 14 ರಂದು ನಡೆಯಲಿದೆ. ಇದರ ಯಶಸ್ವಿಗಾಗಿ ದ.ಕ ಜಿಲ್ಲಾ ವೆಸ್ಟ್ ಇದರ ಅಧೀನದ ಪ್ರತೀ ರೇಂಜ್‌ ಗಳಿಗೆ ಕರೆ ನೀಡಿದರು.

ಮದ್ರಸ ಅಧ್ಯಾಪಕರುಗಳಿಗಾಗಿ ಎರಡು ವರ್ಷಕ್ಕೊಮ್ಮೆ ನಡೆಯುವ ಪ್ರತಿಭಾ ಕಾರ್ಯಕ್ರಮ ಮುಅಲ್ಲಿಂ ಮೆಹರ್ಜಾನ್ ಎಸ್ ಜೆ ಎಂ ಇದರ ಪ್ರತೀ ಘಟಕಗಳಲ್ಲಿ ನಡೆಯಲಿದ್ದು, ದ.ಕ ವೆಸ್ಟ್ ಜಿಲ್ಲಾ ಮುಅಲ್ಲಿಂ ಮೆಹರ್ಜಾನ್ ನವೆಂಬರ್ ನಾಲ್ಕರಂದು ನಡೆಯಲಿದೆ. ಇದರ ಯಶಸ್ವೀ ಕಾರ್ಯ ಚಟುವಟಿಕೆಗಳಿಗಾಗಿ ಮುಅಲ್ಲಿಂ ಮೆಹರ್ಜಾನ್ ನಿರ್ವಹಣಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಚೇರ್ಮಾನ್ ಆಗಿ ಅಬ್ದುಲ್ ಮಜೀದ್ ಸಖಾಫಿ ಕೈಕಂಬ, ಚೀಫ್ ಕನ್ವೀನರಾಗಿ ಸೆರ್ಕಳ ಇಬ್ರಾಹಿಂ ಸಖಾಫಿ ಮತ್ತು ಸದಸ್ಯರುಗಳಾಗಿ ದ.ಕ ಜಿಲ್ಲಾ ವೆಸ್ಟ್ ಇದರ PST ಗಳಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಮುಹಮ್ಮದ್ ಸಖಾಫಿ, ಅಶ್ರಫ್ ಇಮ್ದಾದಿ ಮತ್ತು ಚಿಪ್ಪಾರ್ ಅಬ್ದುಲ್ ರಹ್ಮಾನ್ ಸಖಾಫಿ, ನವಾಝ್ ಸಖಾಫಿ ಉಳ್ಳಾಲ ಇವರು ಗಳನ್ನು ಆಯ್ಕೆ ಮಾಡಲಾಯಿತು. ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಖಾಫಿ ಉರುವಾಲು ಪದವು ಸ್ವಾಗತಿಸಿದರು. ರಿಯಾಝ್ ಅಹ್ಸನಿ ಕಿನ್ನಿಗೋಳಿ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News