×
Ad

ಎಸ್‌ಜೆಎಂ ಮುಅಲ್ಲಿಂ ಜಿಲ್ಲಾ ಸಮ್ಮೇಳನದ ಸಿದ್ಧತಾ ಸಭೆ

Update: 2025-10-10 17:00 IST

ಮಂಗಳೂರು, ಅ.10: ಮುಅಲ್ಲಿಂ ಜಿಲ್ಲಾ ಸಮ್ಮೇಳನ ನಿರ್ವಹಣಾ ಸಮಿತಿಯ ಸಿದ್ಧತಾ ಸಭೆಯು ಪಡೀಲ್ ಇಲ್ಮ್ ಸೆಂಟರಿನಲ್ಲಿ ಇತ್ತೀಚೆಗೆ ನಡೆಯಿತು. ಎಸ್‌ಜೆಎಂ ರಾಜ್ಯ ಉಪಾಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ ದುಆಗೈದರು. ನಿರ್ವಹಣಾ ಸಮಿತಿಯ ಚೀಫ್ ಕನ್ವೀನರ್ ಯಾಕೂಬ್ ಲತೀಫಿ ಸ್ವಾಗತಿಸಿದರು. ಎಸ್‌ಜೆಎಂ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ರಹ್ಮಾನ್ ಮದನಿ ಜೆಪ್ಪುಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ವಹಣಾ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಮೂರುಗೋಳಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಅಲ್ಲಿಂ ಸಮ್ಮೇಳನಕ್ಕೆ ಅಂತಿಮ ರೂಪುರೇಷೆ ನೀಡಲಾಯಿತು.

ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾದ ನೂರನೇ ವಾರ್ಷಿಕದ ಪ್ರಯುಕ್ತ ಎಸ್‌ಜೆಎಂ ದ.ಕ. ಜಿಲ್ಲಾ ವೆಸ್ಟ್, ಈಸ್ಟ್, ಸೌತ್ ವತಿಯಿಂದ ಜಿಲ್ಲಾ ಮುಅಲ್ಲಿಂ ಸಮ್ಮೇಳನ ಮತ್ತು ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯ ಕ್ರಮವು ನಗರದ ಪುರಭವನದಲ್ಲಿ ಅ.14ರಂದು ನಡೆಯಲಿದೆ. ದ.ಕ ವೆಸ್ಟ್, ಈಸ್ಟ್ ಮತ್ತು ಸೌತ್ ಜಿಲ್ಲಾ ಅಧೀನದ ಮದ್ರಸಗಳ ಸುಮಾರು 1500 ಮುಅಲ್ಲಿಮರು ಭಾಗವಹಿಸಲಿದ್ದಾರೆ. ಕರ್ನಾಟಕದ 58ಕ್ಕೂ ಅಧಿಕ ಮದ್ರಸಗಳ ನಿರ್ಮಾಣಕ್ಕೆ ಆರ್ಥಿಕ ನೆರವು ವಿತರಣೆ, ಕಳೆದ 15 ವರ್ಷಗಳಿಂದ ನಿರಂತರವಾಗಿ ಒಂದೇ ಮದ್ರಸದಲ್ಲಿ ಸೇವೆ ಸಲ್ಲಿಸುತ್ತಿರುವ ಮುಅಲ್ಲಿಮರಿಗೆ ನಗದು ಬಹುಮಾನ ಮತ್ತು ಅಭಿನಂದನೆ, ಹಿರಿಯ ಸಾದಾತುಗಳಿಗೆ ಮತ್ತು ನಾಯಕರಿಗೆ ಸನ್ಮಾನ ನಡೆಯಲಿದೆ.

ಸಿದ್ಧತಾ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ. ಮುಹಮ್ಮದ್ ಮದನಿ ಪೂಡಲ್, ಎಸ್‌ಜೆಎಂ ವೆಸ್ಟ್ ಜಿಲ್ಲಾಧ್ಯಕ್ಷ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ರಾಜ್ಯ ಜೊತೆ ಕಾರ್ಯದರ್ಶಿಗಳಾದ ಅಬ್ದುಲ್ ಅಝೀಝ್ ನೂರಾನಿ, ಇಬ್ರಾಹಿಂ ನಯೀಮಿ, ನಿರ್ವಹಣಾ ಸಮಿತಿಯ ವೈಸ್ ಚೇಯರ್‌ಮಾನ್ ಹಾಫಿಳ್ ಮುಹಮ್ಮದ್ ಹನೀಫ್ ಮಿಸ್ಬಾಹಿ, ವೈಸ್ ಕನ್ವೀನರುಗಳಾದ ಇಸ್ಮಾಯಿಲ್ ಸಅದಿ ಉರುಮಣೆ, ಯೂನುಸ್ ಇಮ್ದಾದಿ ಅಲ್ ಫುರ್ಖಾನಿ, ಸೆರ್ಕಳ ಇಬ್ರಾಹಿಂ ಸಖಾಫಿ, ಚಿಪ್ಪಾರ್ ಅಬ್ದುಲ್ ರಹ್ಮಾನ್ ಸಖಾಫಿ, ಸದಸ್ಯರಾದ ಅಶ್ರಫ್ ಇಮ್ದಾದಿ, ಅಬೂಬಕರ್ ಹಂದಾನಿ ಸುಳ್ಯ, ನವಾಝ್ ಸಖಾಫಿ ಉಳ್ಳಾಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News