ಡಿ.7-14: ಕೊಲ್ಯ ಶ್ರೀ ರಾಮ ಭಜನಾ ಮಂದಿರದ ಅಮೃತ ಮಹೋತ್ಸವ
ಉಳ್ಳಾಲ: ಶ್ರೀ ರಾಮ ಭಜನಾ ಮಂದಿರ ಸೋಮೇಶ್ವರ ಕೊಲ್ಯ ಇದರ ಅಮೃತ ಮಹೋತ್ಸವ ಸಮಾರಂಭ ಡಿ.7 ರಿಂದ ಡಿ.14 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಶ್ರೀ ರಾಮ ಭಜನಾ ಮಂದಿರದ ಅಮೃತ ಮಹೋತ್ಸವ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಉಳ್ಳಾಲ ಹೇಳಿದರು.
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.7 ರಂದು ಕೊಲ್ಯ ಶ್ರೀ ಮುಕಾಂಬಿಕಾ ದೇವಸ್ಥಾನದಿಂದ ಶ್ರೀ ರಾಮ ಭಜನಾ ಮಂದಿರದವರೆಗೆ ಮೆರವಣಿಗೆ ನಡೆಯಲಿದೆ. ಡಿ.12 ರಂದು ಸಂಧ್ಯಾ ಭಜನೆ ಮಂಗಳಾಚರಣೆ ಬಳಿಕ ಶ್ರೀ ರಾಮ ಮೈದಾನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಡಿ.13 ರಂದು ಏಕಾಹ ಭಜನಾ ಸಂಕೀರ್ತನೆ, ಮಧ್ಯಾಹ್ನ ಅನ್ನಸಂತರ್ಪಣೆ, ಡಿ.14 ರಂದು ಸಾಂಸ್ಕೃತಿಕ,ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿ ಯಲ್ಲಿ ಶ್ರೀ ರಾಮ ಭಜನಾ ಮಂದಿರದ ಅಮೃತ ಮಹೋತ್ಸವದ ಅಧ್ಯಕ್ಷ ಪ್ರಶಾಂತ್ ಗಟ್ಟಿ, ಮಂದಿರದ ಅಧ್ಯಕ್ಷ ಪ್ರೀತಂ ಕುಮಾರ್ ಕೊಲ್ಯ, ಶ್ರೀ ರಾಮ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ವಿಶ್ವತ್ ಕುಲಾಲ್ ಕೊಲ್ಯ ಉಪಸ್ಥಿತರಿದ್ದರು.