×
Ad

ಶಿವರಾಮ ಕಾರಂತರ ಕೃತಿಯಾಧಾರಿತ ಸಿನೆಮಾಗಳ ಕುರಿತು ವಿಚಾರ ಸಂಕಿರಣ

Update: 2025-10-10 17:09 IST

ಮುಡಿಪು: ಸಿನೆಮಾದ ಮೂಲಕ ನಮಗೆ ಹಲವು ಕಾದಂಬರಿಗಳನ್ನು ಓದುವ ಅವಕಾಶಗಳು ಸಿಕ್ಕಿದೆ. ಅದು ನಮ್ಮಂತಹವರಿಗೆ ಒಂದೊಳ್ಳೆಯ ಬೆಳವಣಿಗೆಯಾಗಿದೆ ಎಂದು ದಸ್ಕತ್ ಸಿನೆಮಾದ ನಿರ್ದೇಶಕ ಅನೀಶ್ ಬೆಳ್ತಂಗಡಿ ಹೇಳಿದರು.

ಕೊಣಾಜೆಯ ಮಂಗಳಗಂಗೋತ್ರಿಯಲ್ಲಿರುವ ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಕಾರಂತರ ಕೃತಿಯಾಧಾರಿತ ಸಿನಿಮಾಗಳ ವಿಚಾರಣ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಸಂದರ್ಭ ಡಾ. ಶಿವರಾಮ ಕಾರಂತರ ಚೋಮನ ದುಡಿ, ಬೆಟ್ಟದ ಜೀವ, ಸರಸಮ್ಮನ ಸಮಾಧಿ ಕೃತಿಗಳ ಬಗ್ಗೆ ವಿದ್ಯಾಥಿಗಳಾದ ಸ್ನೇಹಾ, ಅಭಿಷೇಕ್ ವಾಲ್ಮೀಕಿ, ಜಗದೀಶ್ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗಪ್ಪ ಗೌಡ, ಪ್ರೊ. ಸೋಮಣ್ಣ, ಡಾ.ಧನಂಜಯ ಕುಂಬ್ಳೆ, ಡಾ. ಯಶುಕುಮಾರ್ ಡಿ. ಉಪಸ್ಥಿತರಿದ್ದರು. ಕೊಡವ ಅಧ್ಯಯನ ಪೀಠದ ಸಹಾಯಕ ಯತೀಶ್ ಕುಮಾರ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News