ಬಾಲಕ ನಾಪತ್ತೆ
Update: 2025-10-10 20:32 IST
ಮಂಗಳೂರು, ಅ.10: ನಗರದ ಸುಭಾಷ್ ನಗರದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಸಮರ್ಥ್ ಅರುಣ್ ಗುಜಮಾಗಡಿ (15) ಎಂಬಾತ ಕಾಣೆಯಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಈತ ಅ.4ರಂದು ಸಂಜೆ ಮ್ಯಾರಥಾನ್‌ಗೆ ಹೋಗಬೇಕು ಎಂದು ತಾಯಿಯ ಬಳಿ ಕೇಳಿದ್ದ. ಆದರೆ ತಾಯಿ ನಿರಾಕರಿಸಿದ್ದಕ್ಕೆ ಮನೆಯಿಂದ ಹೊರಟು ಹೋದವ ಕಾಣೆಯಾಗಿದ್ದಾನೆ.
ದುಂಡು ಮುಖದ, ಗೋಧಿ ಮೈ ಬಣ್ಣದ, 5 ಅಡಿ ಎತ್ತರದ ಈತ ನೀಲಿ ಬಣ್ಣದ (ಕಾಲೇಜು ಯುನಿಫಾರ್ಮ್) ಅರ್ಧ ತೋಳಿನ ಟೀ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಎರಡು ಕಿವಿಗಳಲ್ಲಿ ಬಿಳಿ ಹರಳಿನ ಬಂಗಾರದ ಬೊಟ್ಟು ಗಳು ಇವೆ. ಈತನನ್ನು ಕಂಡವರು ಪಾಂಡೇಶ್ವರ ಠಾಣೆಗೆ (0824-2220518)ಮಾಹಿತಿ ನೀಡುವಂತೆ ಪಾಂಡೇಶ್ವರ ಪೊಲೀಸರು ಮನವಿ ಮಾಡಿದ್ದಾರೆ.