ಪುತ್ತೂರು ತಾಲೂಕು ಮಟ್ಟದ ದಫ್ ಸ್ಪರ್ಧೆ: ಬದ್ರಿಯಾ ದಫ್ ಕಮಿಟಿ ವೀರಮಂಗಳ ಪ್ರಥಮ
ಪುತ್ತೂರು, ಡಿ.18: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಆಯೋಜಿಸಿದ್ದ ಪುತ್ತೂರು ತಾಲೂಕು ಮಟ್ಟದ ದಫ್ ಸ್ಪರ್ಧೆಯಲ್ಲಿ ಬದ್ರಿಯಾ ದಫ್ ಕಮಿಟಿ ವೀರಮಂಗಳ ಪ್ರಥಮ ಮತ್ತು ದಿಲ್‌ದಾರ್ ಮದೀನಾ ದಫ್ ಕಮಿಟಿ ಪುರುಷರಕಟ್ಟೆ ದ್ವಿತೀಯ ಸ್ಥಾನ ಪಡೆದು ಡಿ.20ರಂದು ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ಆವರಣದಲ್ಲಿ ನಡೆಯಲಿರುವ ದ.ಕ.ಜಿಲ್ಲಾ ಮಟ್ಟದ ದಫ್ ಸ್ಪರ್ಧೆಗೆ ಆಯ್ಕೆಯಾಗಿವೆ.
ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಸ್ಪರ್ಧೆ ಉದ್ಘಾಟಿಸಿದರು. ಕೆ. ಉಮರ್ ಕರಾವಳಿ, ಅಬ್ದುಲ್ ಹಮೀದ್ ಸೋಂಪಾಡಿ, ಶೇಖ್ ಝೈನುದ್ದೀನ್, ಅಬ್ದುಲ್ ಸಮದ್ ಸೋಂಪಾಡಿ, ಪಿ. ಮುಹಮ್ಮದ್, ನವಾಝ್ ಕೆರೆಮೂಲೆ ಮತ್ತು ಅಕಾಡಮಿಯ ಸದಸ್ಯ ಅನ್ಸಾರ್ ಕಾಟಿಪಳ್ಳ ಭಾಗವಹಿಸಿದರು.
ಸಾಲ್ಮರದ ಮೌಂಟನ್ ವ್ಯೆವ್ ಶಾಲಾ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಐ. ಝಕರಿಯಾ ಕಡಬ ಮತ್ತು ಮುಹಮ್ಮದ್ ಅನಸ್ ಕೆ. ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು. ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಅಸೋಸಿಯೇಶನ್ ಅಧ್ಯಕ್ಷ, ಪತ್ರಕರ್ತ ಅಬ್ದುಲ್ ಲತೀಫ್ ನೇರಳಕಟ್ಟೆ ಸ್ಪರ್ಧೆ ನಿರೂಪಿಸಿದರು.
ಹಾಫಿಝ್ ಮುಹಮ್ಮದ್ ಸಿನಾನ್ ಕಿರಾಅತ್ ಪಠಿಸಿದರು. ನ್ಯಾಯವಾದಿ ನೂರುದ್ದೀನ್ ಸಾಲ್ಮರ ಸ್ವಾಗತಿಸಿದರು. ಸ್ಪರ್ಧೆಯ ಸಂಚಾಲಕ ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಕೆ.ಎಂ. ಸಿದ್ದೀಕ್ ವಂದಿಸಿದರು.