×
Ad

ಹವ್ಯಕ ಭಾಷಾ ಅಕಾಡೆಮಿಯ ರಚನೆಯ ತೀರ್ಮಾನಕ್ಕೆ ಸ್ವಾಗತ: ಎಂ.ಜಿ.ಹೆಗ್ಡೆ

Update: 2026-03-07 21:38 IST

ಮಂಗಳೂರು, ಮಾ.7; ಹವ್ಯಕ ಭಾಷಾ ಅಕಾಡೆಮಿ ರಚನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ಸ್ವಾಗತಾರ್ಹ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗ್ಡೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಹವ್ಯಕ ಭಾಷೆಗೆ ನೂರಾರು ವರುಷಗಳ ಇತಿಹಾಸ ಇದೆ. ಉತ್ತರ ಕನ್ನಡ, ಶಿವಮೊಗ್ಗ, ದ.ಕ, ಕಾಸರಗೋಡು ಹಾಗೂ ಇತರ ಜಿಲ್ಲೆ ಗಳು ಸೇರಿದಂತೆ ಸುಮಾರು ಆರೂವರೆ ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ಪರಿಷತ್ತಿನ ಸದಸ್ಯ ಲಕ್ಷ್ಮೀಶ ಗಬ್ಲ ಲಡ್ಕ ಅವರು ಪ್ರಯತ್ನ ಸ್ಮರಿಸಬೇಕಾಗಿದೆ ಎಂದು ಎಂ.ಜಿ.ಹೆಗ್ಡೆ ತಿಳಿಸಿದ್ದಾರೆ. ಈ ರೀತಿಯ ಅಕಾಡೆಮಿಯ ರಚನೆಯಿಂದ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾ ರಿಗಳಾದ ಪ್ರಕಾಶ್ ಸಾಲ್ಯಾನ್,ಯೋಗೀಶ್ ನಾಯ್ಕ್ , ಶುಭೋದಯ ಆಳ್ವ, ನಮಿತಾ ಡಿ ಆಳ್ವ, ಚಂದ್ರಕಲಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News