ಉಪ್ಪಿನಂಗಡಿ:ಅಕ್ರಮ ಡಿಸೇಲ್ ದಾಸ್ತಾನು ಆರೋಪ; ಪ್ರಕರಣ ದಾಖಲು
Update: 2026-03-10 21:39 IST
ಉಪ್ಪಿನಂಗಡಿ: ಅಕ್ರಮವಾಗಿ ಡಿಸೇಲ್ ದಾಸ್ತಾನಿರಿಸಿದ್ದ ಪ್ರಕರಣವೊಂದನ್ನು ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ತಂಡ ಪತ್ತೆ ಮಾಡಿದ್ದು, ಸೊತ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುರಲ್ತಿಯಾರ್ ಎಂಬಲ್ಲಿ ಜಗದೀಶ್ (35) ಎಂಬಾತನ ಮನೆಯ ಸಮೀಪದ ಶೆಡ್‍ನಲ್ಲಿ ಸುಮಾರು 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್‍ಗಳು ಹಾಗೂ ಸುಮಾರು 35 ಲೀಟರ್ ಸಾಮರ್ಥ್ಯದ 5 ಕ್ಯಾನ್‍ಗಳಲ್ಲಿ ಒಟ್ಟು 4,175 ಲೀಟರ್‍ನಷ್ಟು ಡೀಸೆಲ್ ಶೇಖರಿಸಿಟ್ಟಿರುವುದು ಪತ್ತೆಯಾಗಿದೆ. ಸ್ಥಳದಲ್ಲಿ ಇನ್ನಷ್ಟು ಖಾಲಿ ಬ್ಯಾರೆಲ್‍ಗಳು ಹಗೂ ಸುಮಾರು ಕ್ಯಾನ್‍ಗಳು ಮತ್ತು ಇತರೆ ಸೊತ್ತುಗಳು ಪತ್ತೆಯಾಗಿದೆ. ಪತ್ತೆಯಾದ ಸೊತ್ತುಗಳ ಮೌಲ್ಯ 3,50,000 ರೂ. ಎಂದು ಅಂದಾಜಿಸಲಾಗಿದೆ. ಸೊತ್ತುಗಳನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿ ಜಗದೀಶ್ ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.