×
Ad

ಕೇರಳಯಾತ್ರೆ: ಜ.1ರಂದು ಎಸ್‌ವೈಎಸ್ ಐಕ್ಯದಾರ್ಡ್ಯ ಸಂಗಮ

Update: 2025-12-31 21:49 IST

ಮಂಗಳೂರು, ಡಿ.31: ಕೇರಳ ಮುಸ್ಲಿಂ ಜಮಾಅತ್ ವತಿಯಿಂದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ನೇತೃತ್ವದಲ್ಲಿ ಜನವರಿ 1 ರಿಂದ 16 ತನಕ ಕಾಸರಗೋಡಿನಿಂದ ತಿರುವನಂತಪುರ ತನಕ ನಡೆಯುವ ಮೂರನೆಯ ಕೇರಳ ಯಾತ್ರೆಯ ಅಂಗವಾಗಿ ಎಸ್‌ವೈಎಸ್ ಐಕ್ಯದಾರ್ಡ್ಯ ಸಂಗಮ ಕಾರ್ಯಕ್ರಮ ಜನವರಿ 1 ರಂದು ನಡೆಯಲಿದೆ.

ಮಧ್ಯಾಹ್ನ 1:30ಕ್ಕೆ ಉಳ್ಳಾಲ ದರ್ಗಾ ಝಿಯಾರತ್ ನಡೆಯಲಿದ್ದು, ಬಳಿಕ ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ ಉಳ್ಳಾಲ ದರ್ಗಾದಿಂದ ತಲಪಾಡಿ ತನಕ ಕೇರಳ ಯಾತ್ರಾ ನಾಯಕರ ಜತೆ ಸಾಗಲಿದೆ. ಕೇರಳ ಗಡಿ ತಲಪಾಡಿ ಟೋಲ್‌ಗೇಟ್ ಬಳಿ ಮಧ್ಯಾಹ್ನ 2:00 ಗಂಟೆಗೆ ಕೇರಳ ಯಾತ್ರೆಯ ನಾಯಕರನ್ನು ಗೌರವಿಸುವ ಐಕ್ಯದಾಡ್ಯ ಸಂಗಮವು ನಡೆಯಲಿದೆ.

ಎಸ್‌ವೈಎಸ್ ದ.ಕ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News