ಸ್ವಚ್ಛ ಮನೆ ಸ್ವಯಂ ಘೋಷಣೆಯೊಂದಿಗೆ ಹೊಸ ವರ್ಷಾಚರಣೆ: ಶೀನ ಶೆಟ್ಟಿ
ಮುಡಿಪು: ಸ್ವಚ್ಚ ಮನೆ ಸ್ವಯಂ ಘೋಷಣೆ ಮೂಲಕ ಕಸ ಬಯಲು ಕಸಾಲಯ ಮುಕ್ತ ಸ್ವಚ್ಚ ಸ್ವರಾಜ್ಯ ಕಟ್ಟುವ ಸಂಕಲ್ಪ ದೊಂದಿಗೆ ಹೊಸ ವರ್ಷಾಚರ ಣೆಯನ್ನು ಆಚರಿಸು ವಂತೆ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಕೋರಿದ್ದಾರೆ.
ಅವರು ಮುಡಿಪು ಜನಶಿಕ್ಷಣ ಟ್ರಸ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡ ಸ್ವಚ್ಛ ಮನೆ ಸ್ವಾಭಿಮಾನಿ ಕುಟುಂಬ ಸ್ವಯಂ ಘೋಷಣಾ ಪತ್ರ ನೀಡುವ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಜನ ಶಿಕ್ಷಣ ಟ್ರಸ್ಟ್, ಅಪ್ನಾದೇಶ್ ಸ್ವಚ್ಚ ಗ್ರಾಮ ಅಭಿಯಾನ ದಡಿ ಗ್ರಾ.ಪಂ ಸಂಘ ಸಂಸ್ಥೆ ಸಹಯೋಗದಲ್ಲಿ ಕಳೆದ 3ವರ್ಷಗಳಿಂದ ಸ್ವಚ್ಚ ಮನೆ ಸ್ವಯಂ ಘೋಷಣೆ ಬಗ್ಗೆ ಅರಿವು ಮೂಡಿಸುತ್ತಾ , ಹತ್ತು ಸಾವಿರ ಕುಟುಂಬಗಳ ಮನೆ ಗಳಿಂದ ಸ್ವಯಂ ಘೋಷಣೆ ಪತ್ರಗಳನ್ನು ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು ಈಗಾಗಲೇ ಉಳ್ಳಾಲ ತಾಲೂಕಿನ ನರಿಂಗಾನ ಪುತ್ತೂರು ತಾಲೂಕನ ಒಳಮೊಗ್ರು ಗ್ರಾಮ ಪಂಚಾಯತ್ ಬಂಟ್ವಾಳ ಪುತ್ತೂರು ಸಾಂತ್ವನ ಕೇಂದ್ರ, ತಾಲೂಕು ಸಂಜೀವಿನಿ ಒಕ್ಕೂಟ, ಸ್ಮೈಲ್ ಸ್ಕಿಲ್ ಸ್ಕೂಲ್, ಮಂಗಳೂರು ವಿಶ್ವವಿದ್ಯಾಲಯ ಸಮಾಜ ಕಾರ್ಯ ವಿಭಾಗದ, ಶಾರದಾ ಆಯುರ್ವೇದ ಕಾಲೇಜು ಸ.ಪ್ರ. ದರ್ಜೆ ಕಾಲೇಜು ಮುಡಿಪು,ವಾಮದ ಪದವು, ಪುಂಜಾಲಕಟ್ಟೆ ಹಾಗೂ ಬೀರಿಗ, ಪೆರಾಬೆ ಅಂಗನವಾಡಿ, ಗ್ರಾಮ ವಿಕಾಸ ಕೇಂದ್ರಗಳ ಮೂಲಕ ಸುಮಾರು ಐದು ಸಾವಿರಕ್ಕೂ ಹೆಚ್ಚು ಕುಟುಂಬದವರು ಸ್ವಯಂ ಘೋಷಣೆ ಪತ್ರ ಸಲ್ಲಿಸಿದ್ದಾರೆ ಎಂದು ಶೀನ ಶೆಟ್ಟಿ ಸಭೆಗೆ ಮಾಹಿತಿ ನೀಡಿದ್ದಾರೆ.
ಬಯಲು ಕಸಾಲಯಗಳನ್ನು ಅಳಿಸಿ ಸುಸ್ಥಿರ ಸ್ವಚ್ಛತೆ ಸಾಧಿಸಲು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಸುಡದೆ ಮೂಲದಲ್ಲೇ ಹಸಿ ಒಣ ಅಪಾಯಕಾರಿ ಕಸಗಳನ್ನು ವಿಂಗಡಿಸಿ ಸಮರ್ಪಕವಾಗಿ ನಿರ್ವಹಿಸುತ್ತಿರುವ ಕುಟುಂಬಗಳು ಸ್ವಚ್ಚ ಮನೆ ಸ್ವಾಭಿಮಾನಿ ಕುಟುಂಬ ಸ್ವಯಂ ಘೋಷಣೆ ಪತ್ರಗಳನ್ನು ಸಲ್ಲಿಸಿ ಸುಸ್ಥಿರ ಸ್ವಚ್ಛತೆಯ ಕಾರ್ಯ ಸಾಧನೆಗೆ ಮುನ್ನುಡಿ ಬರೆಯುತ್ತಿದ್ದಾರೆ ಎಂದವರು ತಿಳಿಸಿದ್ದಾರೆ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಸ್ವಚ್ಚ ಮನೆ ಸ್ವಯಂ ಘೋಷಣೆ ಮೂಲಕ ಕಸ ಮುಕ್ತ ಜಿಲ್ಲೆಯ ಕಾರ್ಯಾಚರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒಗೆ ಸೂಚಿಸಿದ್ದಾರೆ ಅದೇರೀತಿ ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರ ಸ್ವಚ್ಛ ಗ್ರಾಮಗಳ ನಿರ್ಮಾಣಕ್ಕೆ ಸ್ವಯಂ ಘೋಷಣೆ ಪತ್ರ ಸಲ್ಲಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯವರೂ ಅಪಾರ ಮುಖ್ಯ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಕೋರಿದ್ದಾರೆ.ಈ ಸಂದರ್ಭ ವಿವಿಧ ಸಂಘ ಸಂಸ್ಥೆಗಳ ಸ್ವಚ್ಛತಾ ಸೇನಾನಿಗಳು ಉಪಸ್ಥಿತರಿದ್ದರು.