×
Ad

ದ.ಕ.ಜಿಲ್ಲೆ: 10 ಮಂದಿಗೆ ಕೋವಿಡ್‌ ಪಾಸಿಟಿವ್

Update: 2023-12-31 20:57 IST

ಮಂಗಳೂರು, ಡಿ.31: ದ.ಕ. ಜಿಲ್ಲೆಯಲ್ಲಿ ರವಿವಾರ 270 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 10 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಅಲ್ಲದೆ 40 ಸಕ್ರಿಯ ಪ್ರಕರಣವಿದೆ.

ಕೋವಿಡ್ ಸೋಂಕಿತ 10 ಮಂದಿಯ ಪೈಕಿ 6 ಮಂದಿ ಮಹಿಳೆಯರು ಮತ್ತು 4 ಮಂದಿ ಪುರುಷರು ಇದ್ದಾರೆ. ಇದರಲ್ಲಿ ಬಂಟ್ವಾಳದ 3, ಬೆಳ್ತಂಗಡಿಯ 1, ಮಂಗಳೂರಿನ 6 ಮಂದಿ ಸೇರಿದ್ದಾರೆ.

ಈವರೆಗೆ 1,37,384 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, 1,35,475 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ ನಿಂದ ದ.ಕ.ಜಿಲ್ಲೆಯಲ್ಲಿ ಒಟ್ಟು 1,869 ಮಂದಿ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News