ಪಡೀಲ್ ಜುಮಾ ಮಸೀದಿ ಕಮಿಟಿಗೆ ನೂತನ ಸಾರಥಿಗಳ ಆಯ್ಕೆ
ಮುಫತ್ತಿಶ್ ಉಮರ್ ದಾರಿಮಿ / ಮುಹಮ್ಮದ್ ಪಡೀಲ್ ( ಕಲಂದರ್ ಹಾಜಿ ) / ಹುಸೈನ್ ಪಡೀಲ್
ಪುತ್ತೂರು: ಅನ್ಸಾರುದ್ದೀನ್ ಜಮಾಅತ್ ವ್ಯಾಪ್ತಿಯ ಪಡೀಲ್ ಮುಈನುಲ್ ಇಸ್ಲಾಂ ಜುಮಾ ಮಸೀದಿ ಹಾಗೂ ಮದರಸ ಸಮಿತಿಯ ವಾರ್ಷಿಕ ಸಭೆಯು ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಅಝಾದ್ ರ ಅಧ್ಯಕ್ಷತೆಯಲ್ಲಿ ಪಡೀಲ್ ಮದರಸ ಸಭಾಂಗಣದಲ್ಲಿ ನಡೆಯಿತು.
ಪಡೀಲ್ ಜುಮಾ ಮಸೀದಿ ಖತೀಬರಾದ ಅಶ್ರಫ್ ರಹ್ಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ವಾರ್ಷಿಕ ವರದಿ ಹಾಗೂ ಆಯವ್ಯಯಗಳ ವಿವರಗಳನ್ನು ಮಂಡಿಸಿದರು. ಆರ್.ಪಿ ಅಬ್ದುಲ್ ರಝಾಕ್ ಪ್ರಸ್ತಾವಿಕವಾಗಿ ಮಾತನಾಡಿದರು. ಅನ್ಸಾರುದ್ದೀನ್ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರವರ ಉಪಸ್ಥಿತಿಯಲ್ಲಿ ಹೊಸ ಸಮಿತಿಯನ್ನು ರಚನೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಯು ಮುಹಮ್ಮದ್ ಹಾಜಿ ಪಡೀಲ್, ಅಧ್ಯಕ್ಷರಾಗಿ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ , ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಪಡೀಲ್ ( ಕಲಂದರ್ ಹಾಜಿ ) ಕೋಶಾಧಿಕಾರಿಯಾಗಿ ಹುಸೈನ್ ಪಡೀಲ್, ಉಪಾಧ್ಯಕ್ಷರಾಗಿ ಎಂ ಎಚ್ ಅಬ್ದುಲ್ ರಹಿಮಾನ್ ಹಾಜಿ , ಜೊತೆ ಕಾರ್ಯದರ್ಶಿಯಾಗಿ ಸಾದಿಕ್ ಪಡೀಲ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರ್. ಪಿ. ಅಬ್ದುಲ್ ರಝಾಕ್, ಇಬ್ರಾಹಿಂ ಹಾಜಿ ಸುಪ್ರೀಂ, ಇಸ್ಹಾಕ್ ಹಾಜಿ ಪಡೀಲ್, ಶಂಸುದ್ದೀನ್ ಪಡೀಲ್, ಹಂಝ ಅರಿಯಡ್ಕ, ಅಬ್ದುಲ್ ಖಾದರ್ (ಪುತ್ತು), ಫಾರೂಕ್ ಪಡೀಲ್ ರವರನ್ನು ಆಯ್ಕೆ ಮಾಡಲಾಯಿತು.