×
Ad

ಮಂಗಳೂರು: ಇಸ್ಪೀಟ್ ಆಟವಾಡುತ್ತಿದ್ದ ಆರೋಪ; 12 ಮಂದಿ ಸೆರೆ

Update: 2025-02-14 22:44 IST

ಮಂಗಳೂರು, ಫೆ.14: ನಗರದ ಕಾರ್ ಸ್ಟ್ರೀಟ್ ಬಳಿ ಕಾರ್ಯಾಚರಿಸುತ್ತಿದ್ದ ಜುಗಾರಿ ಅಡ್ಡೆಗೆ ಬಂದರು ಪೊಲೀಸರು ಶುಕ್ರವಾರ ದಾಳಿ ನಡೆಸಿ ಇಸ್ಪೀಟ್ ಆಟವಾಡುತ್ತಿದ್ದ ಆರೋಪದಲ್ಲಿ 12 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ವಿಠೋಭ ದೇವಸ್ಥಾನದ ಬಳಿಯ ನಾಗರಾಜ್ ಭಂಡಾರಿ ಹಾಗೂ ಆತನ ನಿಕಟವರ್ತಿಗಳು ಎಂದು ಗುರುತಿಸಲಾಗಿದೆ.

ಸುಮಾರು 10 ಕ್ಕೂ ಅಧಿಕ ಮಂದಿ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳಿಂದ ನಗದು ವಶಪಡಿಸಿಕೊಳ್ಳಲಾಗಿದೆ.

ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News