×
Ad

ಸೌದಿ ಅರೇಬಿಯಾದಲ್ಲಿ 17ನೇ ವಿಶ್ವ ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನದ ಪೂರ್ವಭಾವಿ ಸಭೆ

Update: 2023-12-14 22:55 IST

ಜುಬೈಲ್: ಸೌದಿ ಅರೇಬಿಯಾದಲ್ಲಿ ಪ್ರಥಮ ಭಾರಿಗೆ ಜನವರಿ 18 ಮತ್ತು 19ರಂದು ನಡೆಯುವ 17ನೇ ವಿಶ್ವ ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನದ ಪೂರ್ವಭಾವಿ ಸಭೆಯು ಜುಬೈಲ್‌ನ ಕ್ಲಾಸಿಕ್ ರೆಸ್ಟೋರೆಂಟ್‌ನಲ್ಲಿ ಜರುಗಿತು.

ಅನಿವಾಸಿ ಕನ್ನಡಿಗರು ಹಾಗೂ ಹೃದಯವಾಹಿನಿ ಸಂಸ್ಥೆಯು ಪ್ರಸ್ತುತ ಪಡಿಸುವ ಈ ಸಮ್ಮೇಳನವು ಕನ್ನಡ ನಾಡು-ನುಡಿ, ಇತಿಹಾಸ, ಕಲೆ, ಸಂಸ್ಕೃತಿಯನ್ನು ಅನಾವರಣಗೊಳಿಸುವ ಹಾಗೂ ಕನ್ನಡದ ಕಂಪನ್ನೂ ವಿದೇಶದ ನೆಲದಲ್ಲಿ ಪಸರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಅಲ್ಲದೆ ಸಮ್ಮೇಳನದ ಯಶಸ್ಸಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಝಕರಿಯ ಬಜ್ಪೆ ಹಾಗೂ ಶೇಕ್ ಕರ್ನಿರೆ, ಅಧ್ಯಕ್ಷರಾಗಿ ಸತೀಶ್ ಕುಮಾರ್ ಬಜಾಲ್, ಉಪಾಧ್ಯಕ್ಷರಾಗಿ ಇಬ್ರಾಹಿಂ ಹುಸೈನ್ ಪಡುಬಿದ್ರಿ ಮತ್ತು ಸಂತೋಷ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಸೂರಿಂಜೆ, ಕಾರ್ಯದರ್ಶಿಯಾಗಿ ಪ್ರವೀಣ್ ಪೀಟರ್ ಅರನ್ಹ ಹಾಗೂ ಫಿರೋಝ್ ಕಲ್ಲಡ್ಕ, ಜಂಟಿ ಕಾರ್ಯದರ್ಶಿ ಯಾಗಿ ಮುಹಮ್ಮದ್ ಕೃಷ್ಣಾಪುರ, ಮುಹಮ್ಮದ್ ಮಲೆಬೆಟ್ಟು, ಗೋಪಾಲ ಶೆಟ್ಟಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಅಲಿ ಉಪ್ಪಿನಂಗಡಿ, ಜಂಟಿ ಕೋಶಾಧಿಕಾರಿಯಾಗಿ ನಿತಿನ್ ರಾವ್ ಪಡುಬಿದ್ರಿ, ದಾವೂದ್ ರಿಯಾದ್ ಅವರನ್ನು ಆಯ್ಕೆ ಮಾಡಲಾಯಿತು.

ಮುಖ್ಯ ಸಂಯೋಜಕರಾಗಿ ಮುಹಮ್ಮದ್ ನೂಮನ್, ಸಂಯೋಜಕರಾಗಿ ಮುಹಮ್ಮದ್ ಫಯಾಝ್, ಮುಹಮ್ಮದ್ ಆಯಾಝ್, ಇಸ್ಮಾಯಿಲ್ ಕಾಟಿಪಳ್ಳ , ಯಶಸ್ ಚಂದ್ರಶೇಖರ, ಅಶ್ರಫ್ ನೌಶಾದ್ ಪೊಳ್ಯ, ಪ್ರಸನ್ನ ಭಟ್ ಮತ್ತು ಸಲಹೆಗಾರರಾಗಿ ರಾಜಕುಮಾರ ಬಹರೈನ್, ಶಾಹುಲ್ ಹಮೀದ್, ಸ್ಟ್ಯಾನಿ ಮಥಾಯಸ್, ನರೇಂದ್ರ ಶೆಟ್ಟಿ, ಅಬ್ದುಲ್ ಹಮೀದ್, ಸೈಯದ್ ಬಾವ ಬಜ್ಪೆನೇಮಕ ಗೊಂಡರು.

ಇಕ್ಬಾಲ್ ಮಲ್ಲೂರು ಸ್ವಾಗತಿಸಿದರು. ಪ್ರಧಾನ ಕಾರ್ಯದಶಿ ರಫೀಕ್ ಸೂರಿಂಜೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News