ಮಲಾರ್: ಜ.20ರಂದು ನೂರೇ ಅಜ್ಮಿರ್ ಕಾರ್ಯಕ್ರಮ
ಉಳ್ಳಾಲ: ಯಾದ್ ಫೌಂಡೇಶನ್ ಮಲಾರ್ ವತಿಯಿಂದ ನೂರೇ ಅಜ್ಮಿರ್ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮವು ಜ.20ರಂದು ಉಳ್ಳಾಲ ತಾಲೂಕು ಪಾವೂರು ಗ್ರಾಮದ ಮಲಾರ್ ಜಂಕ್ಷನ್ ನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಅಜ್ಮೀರ್ ಕುಟುಂಬದ ಸಯ್ಯದ್ ಇಜಾಝ್ ಹುಸೈನ್ ಜಿಸ್ತಿ ಅಜ್ಮಿರ್ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ ಎಂದು ಯಾದ್ ಫೌಂಡೇಶನ್ ಮಲಾರ್ ಅಧ್ಯಕ್ಷ ಅಬ್ದುಲ್ ನಿಸಾರ್ ಮಲಾರ್ ತಿಳಿಸಿದ್ದಾರೆ.
ಅವರು ಶುಕ್ರವಾರ ದಂದು ತೊಕ್ಮೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಸಯ್ಯದ್ ಅಮೀರ್ ತಂಙಳ್ ಕಿನ್ಯ ದುವಾ ನೆರವೇರಿಸಲಿದ್ದು, ಸಯ್ಯದ್ ಶರಪುದ್ದಿನ್ ತಂಙಳ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಯಾದ್ ಫೌಂಡೇಶನ್ ಇದರ ಅಧ್ಯಕ್ಷ ಅಬ್ದುಲ್ ನಿಸಾರ್ ಮಲಾರ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸ್ಪೀಕರ್ ಯು ಟಿ ಖಾದರ್ ಫರೀದ್ ಹಾಗೂ ಚೇಯರ್ ಮ್ಯಾನ್ ಆಫ್ ಕರ್ನಾಟಕ ಸ್ಟೇಟ್ ಅಲೈಡ್ ಅಂಡ್ ಸ್ಟೇಟ್ ಕೇರ್ ಕೌನ್ಸಿಲ್ ಡಾ ಯು ಟಿ ಇಫ್ತಿಕಾರ್ ಫರೀದ್, ನೈಶ್ ಕಾಲೇಜು ಬೆಂಗಳೂರು ಇದರ ಚೇಯರ್ ಮ್ಯಾನ್ ಯು ಟಿ ಝುಲ್ಫಿಕರ್ ಫರೀದ್, ಉದ್ಯಮಿ ಹಮೀದ್ ಕಣ್ಣೂರು, ಮಂಗಳೂರು ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಮೋನು, ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ ಭಾಗವಹಿಸಲಿದ್ದಾರೆ ಎಂದರು.
ಸುದ್ದಿ ಗೋಷ್ಠಿ ಯಲ್ಲಿ ಯಾದ್ ಫೌಂಡೇಶನ್ ಮಲಾರ್ ಗೌರವಾಧ್ಯಕ್ಷ ಹಾಮದ್ ಅಲ್ತಾಫ್, ಪ್ರಧಾನ ಸಂಚಾಲಕ ರಿಯಾಝ್ ಅಹ್ಮದ್ ,ಪ್ರಧಾನ ಕಾರ್ಯದರ್ಶಿ ರಿಯಾಝ್ ಎನ್ ಸದಸ್ಯರಾದ ಹನೀಫ್ ಕೆಎಂ ಇರ್ಫಾನ್ ಮಲಾರ್ ,ಹನೀಫ್ ಕುಂಜತ್ತೂರು ಉಪಸ್ಥಿತರಿದ್ದರು.