ಮಾದಕ ವಸ್ತುಗಳ ಮಾರಾಟ/ಸಾಗಾಟ: ಒಟ್ಟು 21 ಪ್ರಕರಣ ದಾಖಲು; 21 ಮಂದಿ ಸೆರೆ
Update: 2025-02-27 19:27 IST
ಮಂಗಳೂರು, ಫೆ.27: ದ.ಕ.ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ/ಸಾಗಾಟ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಜನವರಿ ಮತ್ತು ಫೆಬ್ರವರಿಯಲ್ಲಿ ತೀವ್ರ ಕಾರ್ಯಾಚ ರಣೆ ನಡೆಸಿ 21 ಪ್ರಕರಣ ದಾಖಲಿಸಿ 21 ಮಂದಿಯನ್ನು ಬಂಧಿಸಿದ್ದಾರೆ.
ಜನವರಿಯಲ್ಲಿ ಮಾದಕ ವಸ್ತುಗಳ ಸೇವನೆಯ 7 ಪ್ರಕರಣ ದಾಖಲಿಸಿ 7 ಆರೋಪಿಗಳನ್ನು ಮತ್ತು ಫೆಬ್ರವರಿಯಲ್ಲಿ 14 ಮಾದಕ ವಸ್ತುಗಳ ಸೇವನೆ ಪ್ರಕರಣ ದಾಖಲಿಸಿ 14 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.