×
Ad

ಮಂಗಳೂರು: ಡಿ.23ರಂದು ಆಸ್ಟ್ರೇಲಿಯಾ, ನ್ಯೂಝಿಲೆಂಡ್‍ನ ಪ್ರಮುಖ ವಿಶ್ವವಿದ್ಯಾನಿಲಯಗಳ ಪ್ರತಿನಿಧಿ ಭೇಟಿ

Update: 2023-12-21 22:25 IST

ಮಂಗಳೂರು: ಓವರ್ಸೀಸ್ ಎಜುಕೇಷನಲ್ ಸರ್ವಿಸಸ್ (OES) ಸಂಸ್ಥೆ, ಡಿ. 23ರಂದು ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್‍ನ ಪ್ರಮುಖ ವಿಶ್ವವಿದ್ಯಾನಿಲಯಗಳ ಪ್ರತಿನಿಧಿಯನ್ನು ಭೇಟಿ ಮಾಡುವ ಕಾರ್ಯಕ್ರಮವನ್ನು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ರಸ್ತೆಯ ಮರಿಯನ್ ಪ್ಯಾರಡೈಸ್ ಪ್ಲಾಝಾದ ನಂ. ಎಲ್‍ಜಿ3 ನಲ್ಲಿರುವ ತಮ್ಮ ಕಚೇರಿಯಲ್ಲಿ ಏರ್ಪಡಿಸಿದೆ.

ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಪೇಕ್ಷಿಸುವ ವಿದ್ಯಾರ್ಥಿಗಳು ಫೆಬ್ರವರಿ 2024 ಮತ್ತು ಜುಲೈ 2024 ರ ಸಾಲಿನ ಪ್ರವೇಶಕ್ಕಾಗಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್‍ನ ಉನ್ನತ ಶ್ರೇಣಿಯ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಯನ್ನು ಭೇಟಿ ಮಾಡಬಹುದು. ವೈಯಕ್ತಿಕ ಮಾರ್ಗದರ್ಶನ ಮತ್ತು ಮಾಹಿತಿ ಪಡೆಯಲು ವಿದ್ಯಾರ್ಥಿಗಳು ಅಪರಾಹ್ನ 11 ರಿಂದ ಸಂಜೆ 5ರ ನಡುವೆ ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು. ಪ್ರವೇಶ ಉಚಿತ. ವಿದ್ಯಾರ್ಥಿಗಳು ತಮ್ಮ ಇತ್ತೀಚಿನ ಮಾಕ್ರ್ಸ್ ಕಾರ್ಡ್‍ಗಳ ಎರಡು ಸೆಟ್‍ಗಳನ್ನು ಮಾತ್ರ ತರಬೇಕಾಗುತ್ತದೆ. ಹೆಚ್ಚಿನ ಕೋರ್ಸ್‍ಗಳಿಗೆ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್‍ನಲ್ಲಿ ಶಿಕ್ಷಣ ಪಡೆದ ನಂತರ ಸ್ಥಳೀಯ ಉದ್ಯೋಗ ಪರವಾನಿಗೆ (ಪೋಸ್ಟ್-ಸ್ಟಡಿ ವರ್ಕ್ ಪರ್ಮಿಟ್) ಪಡೆಯಲು ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ ಎಂದು ಸಂಸ್ಥೆಯ ನಿರ್ದೇಶಕ ದಿಲೀಪ್ ರೈ ತಿಳಿಸಿದ್ದಾರೆ.

OES ಸಂಸ್ಥೆ ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಇಂಗ್ಲೆಂಡ್ ಮತ್ತು ಐರ್‍ಲ್ಯಾಂಡ್ ನ ಎಲ್ಲಾ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯಲು ಉಚಿತ ಸೇವೆಗಳನ್ನು ನೀಡುವ ಪ್ರಮುಖ ಸಂಸ್ಥೆಯಾಗಿದೆ. ಕಳೆದ 30 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಪ್ರವೇಶವನ್ನು ಪಡೆದುಕೊಂಡಿದೆ. ಹೆಚ್ಚಿನ ವಿವರಗಳಿಗಾಗಿ, ವಿದ್ಯಾರ್ಥಿಗಳು 9731616027ಗೆ ಕರೆ ಮಾಡಬಹುದು ಅಥವಾ admin@oesedu.com ಗೆ ಇಮೇಲ್ ಮಾಡಬಹುದು. ವೆಬ್‍ಸೈಟ್: www.oesedu.com ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News