×
Ad

ಎಸ್‌ವೈಎಸ್ ದೇರಳಕಟ್ಟೆ ಝೋನ್: 'ಸಿಸ್ಟಮ್ - 25' ತರಬೇತಿ ಕಾರ್ಯಕ್ರಮ

Update: 2025-07-21 22:57 IST

ದೇರಳಕಟ್ಟೆ: ಎಸ್‌ವೈಎಸ್ ದೇರಳಕಟ್ಟೆ ಝೋನ್ ವತಿಯಿಂದ ಆಯ್ದ ನಾಯಕರಿಗಾಗಿ 'ಸಿಸ್ಟಮ್ -25' ತರಬೇತಿಯು ತಿಬ್ಲೆಪದವು ರಹ್ಮಾನಿಯ ಮದ್ರಸದಲ್ಲಿ ನಡೆಯಿತು.

ಝೋನ್ ಅಧ್ಯಕ್ಷರಾದ ಮುತ್ತಲಿಬ್ ಸಖಾಫಿ ಬೆಳ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉಸ್ಮಾನ್ ಝುಹ್ರಿ ಕಿನ್ಯ ಉದ್ಘಾಟಿಸಿದರು.

ಝೋನ್ ವ್ಯಾಪ್ತಿಯ ಐದು ಸರ್ಕಲ್ ಹಾಗೂ ಮೂವತ್ತೆರಡು ಯೂನಿಟ್ ಗಳಿಂದ ಆಯ್ದ ಪ್ರತಿನಿಧಿಗಳಿಗೆ ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ತರಬೇತಿ ನೀಡಿದರು.

ಜಿಲ್ಲಾಧ್ಯಕ್ಷರಾದ ಮೆಹಬೂಬ್ ಸಖಾಫಿ, ಜಿಲ್ಲಾ ಉಪಾಧ್ಯಕ್ಷರಾದ ತೌಸೀಫ್ ಸಅದಿ ಹರೇಕಳ ಶುಭ ಹಾರೈಸಿದರು. ಝೋನ್ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಫಜೀರ್, ಕೋಶಾಧಿಕಾರಿ ಹನೀಫ್ ಬದ್ಯಾರ್, ಉಪಾಧ್ಯಕ್ಷ ಹಮೀದ್ ಕಿನ್ಯ, ಕಾರ್ಯದರ್ಶಿಗಳಾದ ಉಮರುಲ್ ಫಾರೂಕ್ ಸಖಾಫಿ ಕಿನ್ಯ, ಶಾಫಿ ಮದನಿ ಹರೇಕಳ, ಮುಬೀನ್ ಅಕ್ಷರನಗರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ರನ್ನು ಸನ್ಮಾನಿಸಲಾಯಿತು. ಹೈದರ್ ಅಲಿ ಹಿಮಮಿ ಮಲಾರ್ ಸ್ವಾಗತಿಸಿ, ಮುಸ್ತಫಾ ಸಅದಿ ಹರೇಕಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News