×
Ad

ಜ್ಞಾನಾರ್ಜನೆ ನಿರಂತರ ಪ್ರಕ್ರಿಯೆಯಾಗಬೇಕು: ಬಂಬ್ರಾಣ ಉಸ್ತಾದ್

Update: 2025-08-16 18:28 IST

ಪುತ್ತೂರು : ಶಿಕ್ಷಣ ಎಂಬುದು ಕೇವಲ ರ‌್ಯಾಂಕ್, ಡಿಗ್ರಿಗಳಿಗೆ ಸೀಮಿತವಾಗಿರಬಾರದು ಅದು ಮಾನವನ ಸಂಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ಶ್ರೇಷ್ಠ ಸಾಧನವಾಗಬೇಕು, ಆದ್ದರಿಂದಲೇ ಜ್ಞಾನಾರ್ಜನೆ ಬದುಕಿನ ನಿರಂತರ ಪ್ರಕ್ರಿಯೆಯಾಗಿರಬೇಕು ಎಂದು 'ಸಮಸ್ತ' ಕೇಂದ್ರ ಮುಶಾವರ ಸದಸ್ಯ ಖಾಝಿ ಅಲ್ ಹಾಜ್ ಬಿ.ಕೆ.ಅಬ್ದುಲ್‌ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರು ಹೇಳಿದರು.

ಅವರು ನೇರಳಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ನಡೆದ 'ಸಮಸ್ತ ವಿದ್ಯಾಭ್ಯಾಸ ಬೋರ್ಡ್' ಅಧೀನದ ಕರ್ನಾಟಕ ಫಾಳಿಲಾ- ಫಳೀಲಾ ಕಾಲೇಜ್ ಗಳ 'ಲೀಪ್-25' ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು.

ಲೌಕಿಕ ಶಿಕ್ಷಣದ ಜೊತೆಗೆ ಸಮಾನವಾಗಿ ಧಾರ್ಮಿಕ ಶಿಕ್ಷಣ ದೊರೆತಾಗ ಸುಸಂಸ್ಕೃತ ಸಮಾಜ ಕಟ್ಟಲು ಸಾಧ್ಯವಾ ಗುತ್ತದೆ ಎಂದ ಅವರು 'ಸಮಸ್ತ'ದ ಅಧೀನದ ಫಾಳಿಲಾ -ಫಳೀಲಾ ಕಾಲೇಜ್ ಗಳಲ್ಲಿ ಮಹಿಳೆಯರಿಗೆ ಸಮನ್ವಯ ಶಿಕ್ಷಣ ನೀಡಲಾಗುತ್ತಿದ್ದು, ಇದು ಇಂದು ಹೆಚ್ಚು ಪರಿಣಾಮಕಾರಿ ಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಫಾಳಿಲಾ -ಫಳೀಲಾ ಕರ್ನಾಟಕ ಇದರ ಅಧ್ಯಕ್ಷ ಅಬ್ದುಲ್‌ ರಶೀದ್ ಹಾಜಿ ಪರ್ಲಡ್ಕ ಅವರು ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸಿ.ಎಸ್.ಡಬ್ಯು.ಸಿ ಇದರ ಕೇಂದ್ರೀಯ ನಾಯಕರಾದ ಸುಲೈಮಾನ್ ಫೈಝಿ ಚುಂಗತ್ತರ, ಸಅದ್ ಫೈಝಿ ಮಲಪ್ಪುರಂ, ನಿಝಾಂ ವಾಫಿ ಮಲಪ್ಪುರಂ ಮೊದಲಾದವರು ವಿವಿಧ ವಿಷಯಗಳನ್ನು ಮಂಡಿಸಿ ಮಾತನಾಡಿದರು.

ವಿದ್ಯಾರ್ಥಿನಿಯರಿಗೆ ಜೀವನ ಕೌಶಲ್ಯ, ಪ್ರೇರಣಾ ಉಪನ್ಯಾಸ ,ಬದುಕಿನ ಯಶಸ್ಸು, ಕಲಿಕೆಯಲ್ಲಿ ಹೊಸತನ ಮೊದಲಾದವುಗಳ ಬಗ್ಗೆ ವಿವಿಧ ತರಗತಿಗಳು ನಡೆಸಲಾಯಿತು.

ಸಮಾರಂಭದಲ್ಲಿ ಸಯ್ಯಿದ್ ತ್ವಾಹ ಜಿಫ್ರಿ ತಂಙಳ್ ಬೆಳ್ತಂಗಡಿ ಪ್ರಾರ್ಥನೆಗೆ ನೇತೃತ್ವ ನೀಡಿದರು.

ಅಬ್ದುಲ್‌ ರಶೀದ್ ಹನೀಫಿ ಸಜಿಪ, ಹಾರಿಸ್ ಕೌಸರಿ ಗೋಳ್ತಮಜಲು, ತಮ್ಲಿಖ್ ದಾರಿಮಿ ಕುಶಾಲ ನಗರ, ತಾಜುದ್ದೀನ್ ರಹ್ಮಾನಿ ದೇರಳಕಟ್ಟೆ, ಅಬ್ದುಲ್‌ ರಹಿಮಾನ್ ಫೈಝಿ ಕೆಮ್ಮಾರ, ಅಬ್ದುಸಲಾಂ ಫೈಝಿ ಉಪ್ಪಿನಂಗಡಿ, ಬಾತಿಷಾ ಅಝ್ಹರು ಉಪ್ಪಿನಂಗಡಿ, ಅಶ್ರಫ್ ಹಾಜಿ ಸಿಟಿ ಉಪ್ಪಿನಂಗಡಿ, ಅಬ್ದುಲ್‌ ಅಝೀಝ್ ಆತೂರು, ಉವೈಸ್ ಅಲ್ ಅಝ್ಹರಿ ತೋಕೆ ಮೊದಲಾದವರು ಉಪಸ್ಥಿತರಿದ್ದರು.

ಸಿ.ಎಸ್.ಡಬ್ಯು.ಸಿ ಕರ್ನಾಟಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತಿಸಿದರು. ದಾವೂದ್ ಹನೀಫಿ ಮಿತ್ತಬೈಲು ವಿವಿಧ ಕಾರ್ಯಕ್ರಮ ನಿರ್ವಹಿಸಿ ಕೊನೆಗೆ ವಂದಿಸಿದರು.

ಉದ್ಗಾಟನಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿನಿಯರಿಗೆ ಲೀಪ್ -25 ಮತ್ತು ಶಿಕ್ಷಕೀಯರಿಗೆ ಎಫ್.ಡಿ.ಪಿ. ತರಬೇತಿ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News