ಮಂಗಳೂರು - ದುಬೈ ನಡುವಿನ ಏರ್ ಇಂಡಿಯಾ ಎಕ್ಸ್‌ಪ್ರೆಸ್ 3 ವಿಮಾನಗಳ ಹಾರಾಟ ರದ್ದು
Update: 2025-06-17 17:28 IST
ಸಾಂದರ್ಭಿಕ ಚಿತ್ರ
ಮಂಗಳೂರು, ಜೂ.17: ನಿರ್ವಹಣಾ ಕಾರಣದಿಂದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯ ದುಬೈ - ಮಂಗಳೂರು ಎರಡು ಮತ್ತು ಮಂಗಳೂರು - ದುಬೈ ನಡುವಿನ ಒಂದು ವಿಮಾನದ ಹಾರಾಟ ಜೂ.17 ರದ್ದುಗೊಂಡಿದೆ.
ಜೂ.16ರಂದು ಮಂಗಳೂರು - ದುಬೈ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಒಂದು ವಿಮಾನದ ಹಾರಾಟ ರದ್ದಾಗಿತ್ತು. ವಿಮಾನ ರದ್ದಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದ್ದು, ಅನೇಕ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ.
ವಿಮಾನಗಳು ರದ್ದಾಗಿರುವ ಕಾರಣದಿಂದಾಗಿ ಮಂಗಳೂರಿನಿಂದ ಯುಎಇಗೆ ಹೋಗುವ ನಿವಾಸಿಗಳು, ವಾಪಸಾಗುವವರು ಮತ್ತು ರಜಾದಿನಗಳನ್ನು ಕಳೆಯಲು ಬಯಸುವವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.