×
Ad

ಸ್ಮಾರ್ಟ್ ಸಿಟಿ ವಾಟರ್‌ಫ್ರೆಂಟ್ ಕಾಮಗಾರಿ: ಜ.31ರಂದು ಸಾರ್ವಜನಿಕ ಸಭೆ

Update: 2024-01-30 22:12 IST

ಮಂಗಳೂರು: ಮಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ನೇತ್ರಾವತಿ ರೈಲ್ವೆ ಸೇತುವೆಯಿಂದ ಬೋಳಾರ ಸೀ ಫೇಸ್ ವರೆಗಿನ ಜಲಾಭಿಮುಖ ವಾಯುವಿಹಾರ ಅಭಿವೃದ್ಧಿ (waterfront prommende development) ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಈ ಕಾಮಗಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ಹಾಗೂ ವಿವರಣೆ ನೀಡಲು ಜನವರಿ 31ರಂದು ಸಂಜೆ 5.30ಕ್ಕೆ ನಗರದ ಮಂಗಳಾದೇವಿ ಕಾಂತಿ ಚರ್ಚ್ ಹಾಲ್‌ನಲ್ಲಿ ಸಭೆ ನಡೆಯಲಿದೆ.

ಆಸಕ್ತ ಸಾರ್ವಜನಿಕರು ಆಗಮಿಸಬಹುದು ಎಂದು ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ಪ್ರಧಾನ ವ್ಯವಸ್ಥಾಪಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News