ಪಕ್ಷಿಕೆರೆ: 43ನೇ ವಾರ್ಷಿಕ ಅರ್ರಿಫಾಯಿಯಾ ದಫ್ ರಾತೀಬ್ ಉದ್ಘಾಟನೆ
ಹಳೆಯಂಗಡಿ: ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ (ರಿ) ರಿಯಾಲುಲ್ ಇಸ್ಲಾಂ ಜಮಾಅತ್ ಕಮಿಟಿ ಆಶ್ರಯದಲ್ಲಿ ಶೈಖುಲ್ ಮಶಾಯಿಕ್ ಸುಲ್ತಾನುಲ್ ಆರಿಫೀನ್ ಅಸ್ಸೆಯ್ಯದ್ ಅಹ್ಮದುಲ್ ಕಬೀರ್ ರಿಫಾಯಿ (ಖ.ಸ) ಅವರ 43ನೇ ವಾರ್ಷಿಕ ಅರ್ರಿಫಾಯಿಯಾ ದಪ್ ರಾತೀಬ್ ಕಾರ್ಯಕ್ರಮ ಸೋಮವಾರ ಉದ್ಘಾಟನೆ ಗೊಂಡಿತು.
ಸಮಾರಂಭವನ್ನು ಉದ್ಘಾಟಿಸಿ, ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಆದಂ ಅಮಾನಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಲ್ ಹಾಜ್ ಕೆ.ಯು. ಮುಹಮ್ಮದ್ ನೂರಾನಿಯಾ ವಹಿಸಿದ್ದರು. ಸಮಾರಂಭದಲ್ಲಿ ಪಕ್ಷಿಕೆರೆ ಅಲ್ ಮದರಸತುನ್ನೂರಾನಿಯಾದ ಮುಅಲ್ಲಿಂ ಕಲಂದರ್ ಶರೀಫ್ ಸ ಅದಿ, ಮುಹಮ್ಮದ್ ಮುಸ್ತಫಾ ಝೈನಿ, ಜಮಾಅತ್ ಸಮಿತಿಯ ಉಪಾಧ್ಯಕ್ಷ ಮೊಯ್ದೀನ್ ಬಾವ, ಗೌರವಾಧ್ಯಕ್ಷ ಕೆ.ಪಿ. ಪಲ್ಲಿಕುಟ್ಟಿ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ಬಳಿಕ ಕೆ.ವಿ.ಎಸ್. ಅಮಾನಿ ಮೌಲವಿ ಪಾಲಕ್ಕಾಡ್ ಮತ್ತು ಸಂಘಡಿಗರಿಂದ "ಬದರ್ ಚರಿತ್ರೆ" ಕಥಾ ಪ್ರಸಂಗ ನಡೆಯಿತು.
ಪಕ್ಷಿಕೆರೆ ಅಲ್ ಮದರಸತುನ್ನೂರಾನಿಯಾದ ಸದರ್ ಮುಅಲ್ಲಿಂ ಇಬ್ರಾಹೀಂ ಫಾಲಿಳಿ ಸ್ವಾಗತಿಸಿದರು. ನೌಫಲ್ ಕೆಬಿಎಸ್ ಕಾರ್ಯಕ್ರಮ ನಿರೂಪಿಸಿದರು.