ಮಂಗಳೂರು: ಮಾಸುನ್ ಟೈಲ್ಸ್, ಗ್ರಾನೈಟ್ಸ್-ಮಾರ್ಬಲ್‌ನ 9ನೇ ವಾರ್ಷಿಕ ಸಂಭ್ರಮ
ಮೆಗಾ ಲಕ್ಕಿಡ್ರಾ ವಿಜೇತರಿಗೆ ಬಹುಮಾನ ವಿತರಣೆ
ಮಂಗಳೂರು, ಅ.5: ರಾ.ಹೆ.66ರ ಜಪ್ಪಿನಮೊಗರುವಿನಲ್ಲಿರುವ ಮಾಸುನ್ ಟೈಲ್, ಗ್ರಾನೈಟ್ಸ್ ಮತ್ತು ಮಾರ್ಬಲ್ ಮಳಿಗೆಯಲ್ಲಿ 9ನೇ ವಾರ್ಷಿಕ ಸಂಭ್ರಮವನ್ನು ರವಿವಾರ ಆಚರಿಸಲಾಯಿತು.
ವಾರ್ಷಿಕ ಸಂಭ್ರಮದ ಹಿನ್ನೆಲೆಯಲ್ಲಿ ಜು.5ರಿಂದ ಆರಂಭಿಸಲಾಗಿದ್ದ ಮೆಗಾ ಲಕ್ಕಿ ಡ್ರಾ ಧಮಾಕ ಕೊಡುಗೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಾಲಕ ಮುನೀರ್ ಮೊಯ್ದಿನ್ ಅವರ ತಂದೆ ಅಬ್ದುಲ್ ರಝಾಕ್ ಮೊಯ್ದಿನ್ ಮತ್ತು ಬಿ. ಅಬ್ದುಲ್ಲಾ ವಾರ್ಷಿಕ ಸಂಭ್ರ ಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವಾ, ಮಾಜಿ ಕಾರ್ಪೊರೇಟರ್ ವೀಣಾ ಮಂಗಳ, ದ.ಕ.ಜಿಲ್ಲಾ ನಗರ ಎಸ್‌ಡಿಪಿಐ ಅಧ್ಯಕ್ಷ ಅಬ್ದುಲ್ ಜಲೀಲ್ ಕೆ. , ಮಾಶುಂ ಮುನೀರ್ ಭಾಗವಹಿಸಿದ್ದರು.
ಮಾಲಕ ಮುನೀರ್ ಮೊಯ್ದಿನ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕಿ ತಬಸ್ಸುಂ ಅವರನ್ನು ಸನ್ಮಾನಿಸಲಾಯಿತು. ಪ್ರೇರಣಾ ತರಬೇತುದಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಮಳಿಗೆಯಲ್ಲಿ ಕಟ್ಟಡ ಮತ್ತು ಮನೆಯ ಕಾಮಗಾರಿಗೆ ಬೇಕಾದ ಟೈಲ್, ಗ್ರಾನೈಟ್ಸ್ ಮತ್ತು ಮಾರ್ಬಲ್, ಸ್ಯಾನಿಟರಿವೇರ್ ಮತ್ತು ಟ್ಯಾಪ್ ಫಿಟ್ಟಿಂಗ್ಸ್‌ನ ಉತ್ತಮ ಗುಣಮಟ್ಟದ ವಿವಿಧ ಮಾದರಿಯ ಸಾಮಗ್ರಿಗಳು ಗ್ರಾಹಕರಿಗೆ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.