ಎಸ್ ಕೆ ಎಸ್ ಎಸ್ ಎಫ್ ಪಡ್ಡoದಡ್ಕ ಶಾಖೆ:ಉಚಿತ ಸಾಮೂಹಿಕ ಸುನ್ನತ್, ಹಿಜಾಮ ಶಿಬಿರ
ವೇಣೂರು: 100ನೇ ವಾರ್ಷಿಕೋತ್ಸವ ಪ್ರಚಾರಾರ್ಥ ಪಡ್ಡoದಡ್ಕ ಎಸ್ ಕೆ ಎಸ್ ಎಸ್ ಎಫ್ ಶಾಖೆ ವತಿಯಿಂದ ಉಚಿತ ಸಾಮೂಹಿಕ ಸುನ್ನತ್ ಮತ್ತು ಹಿಜಾಮ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆಪಿ ಬಶೀರ್ ವಹಿಸಿದ್ದು, ನೂರುಲ್ ಹುದಾ ಮಸೀದಿ ಕತೀಬ್ ಕಲಂದರ್ ಶಾಫಿ ಬಾಖವಿ ಅಲ್ ಮನ್ನಾನಿ ಉದ್ಘಾಟಿಸಿದರು. ಅಕ್ರಮ್ ಅಲಿ ತಂಙಲ್ ದುವಾ ಪ್ರಾರ್ಥನೆ ಮಾಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಟ್ಟೆ, ಕಾರ್ಯದರ್ಶಿ ರಫೀಕ್ ಪಡ್ಡ, ಪತ್ರಕರ್ತ ಎಚ್ ಮಹಮ್ಮದ್ ವೇಣೂರು, ಪ್ರಮುಖರಾದ ಅಬ್ದು ರಝಾಕ್ ಮದನಿ , ಎಸ್ಕೆ ಎಸ್ ಎಸ್ ಎಫ್ ಮೂಡಬಿದ್ರಿ ವಲಯ ಅಧ್ಯಕ್ಷ ಎಂ ಎ ಎಸ್ ಆಸೀಫ್ ತೋಡಾರು, ಅಝೀಝ್ ಮಾಲಿಕ್ ಮೂಡಬಿದ್ರಿ, ಅಶ್ರಫ್ ಮರೋಡಿ, ಯುಕೆ ಇರ್ಫಾನ್ ಮೊಹಮ್ಮದ್ , ಅಶ್ರಫ್ ಗಾಂಧಿ ನಗರ , ಅಶ್ರಫ್ ಕಿರೋಡಿ , ಇಕ್ಬಾಲ್ ಕುರ್ಲೊಟ್ಟು ,ಬಸೀರ್ ಗಾಂಧಿನಗರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇದ್ರಿಸ್ ಪುಲಬೆ ಸ್ವಾಗತಿಸಿದರು, ಸ್ವರೂಪ್ ವಂದಿಸಿದರು.