×
Ad

ಫೆ.12: ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದ ಪದಗ್ರಹಣ

Update: 2025-02-10 21:39 IST

ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಮಂಗಳೂರು ಇದರ ಆಶ್ರಯದಲ್ಲಿ ನೂತನ ಮಹಿಳಾ ಘಟಕದ ಪದಗ್ರಹಣ ಕಾರ್ಯಕ್ರಮ ಫೆ.12ರಂದು ಬೆಳಗ್ಗೆ 10ಕ್ಕೆ ನಗರದ ಕಂಕನಾಡಿ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಲಿದೆ.

ಶಮೀಮಾ ಕುತ್ತಾರ್ ನೇತೃತ್ವದ ನೂತನ ಮಹಿಳಾ ಘಟಕದ ಪದಗ್ರಹಣ ಕಾರ್ಯಕ್ರಮವನ್ನು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಚಾಲನೆ ನೀಡಲಿದ್ದಾರೆ. ಅನುಪಮ ಪತ್ರಿಕೆಯ ಉಪ ಸಂಪಾದಕಿ ಸಬೀಹಾ ಫಾತಿಮಾ ಪ್ರಧಾನ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಬ್ಯಾರಿ ಪರಿಷತ್ತಿನ ಯೂಸುಫ್ ವಕ್ತಾರ್, ಜೆ. ಹುಸೈನ್, ಅಹ್ಮದ್ ಬಾವಾ ಬಜಾಲ್, ಅಬ್ದುಲ್ ಮಜೀದ್ ಸೂರಲ್ಪಾಡಿ, ಮುಹಮ್ಮದ್ ಕುಂಜತ್ತಬೈಲ್, ಟಿ.ಎಂ.ಶಹೀದ್ , ಎಂ.ಎಚ್.ಮೊಯ್ದಿನ್, ಲತೀಫ್ ಕಂದಕ್, ಡಾ.ಸಿದ್ದೀಕ್ ಭಾಗವಹಿಸಲಿದ್ದಾರೆ.

ಈ ಸಂದರ್ಭ ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಬ್ಯಾರಿ ಮಹಿಳೆಯರ ಉನ್ನತೀಕರಣ ಕುರಿತು ಸಂವಾದ ಕಾರ್ಯಕ್ರಮ ಮತ್ತು ಮಹಿಳಾ ಕವಿಗೋಷ್ಠಿ ಏರ್ಪಡಿಸಲಾಗಿದೆ. ಸಮಾವೇಶ ವ್ಯವಸ್ಥಾಪಕರಾಗಿ ಇಬ್ರಾಹೀಂ ನಡುಪದವು ಹಾಗೂ ನಿಸಾರ್ ಎಫ್.ಮುಹಮ್ಮದ್ ಅವರನ್ನು ನಿಯೋಜಿಸಲಾಗಿದೆ ಎಂದು ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಯು.ಎಚ್.ಖಾಲಿದ್ ಉಜಿರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News