ಜೂ.21: ಯೆನೆಪೋಯದಲ್ಲಿ ಆಯುಷ್ ಸಚಿವಾಲಯ ನೇತೃತ್ವದಲ್ಲಿ ಯೋಗ ಸಂಗಮ
ಉಳ್ಳಾಲ: 2025 ರಲ್ಲಿ ನಡೆಯುವ ಅಂತಾರಾಷ್ಟೀಯ ಯೋಗ ದಿನ ಮಹತ್ವದ ಮೈಲಿಗಲ್ಲಾಗಿದ್ದು, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ಭಾರತ ಸರಕಾರದ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ 11ನೇ ಯೋಗ ದಿನವನ್ನು ಯೋಗ ಸಂಗಮ ಎಂಬ ರಾಷ್ಟೀಯ ಕಾರ್ಯಕ್ರಮದಡಿ ಆಚರಿಸುತ್ತಿದ್ದು, ಜೂ.21 ರಂದು ದೇರಳಕಟ್ಟೆಯ ಯೆನೆಪೋಯ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ಬೆಳಿಗ್ಗೆ 6.30 ರಿಂದ 7.45ರವರೆಗೆ ನಡೆಯಲಿರುವ ಆಚರಣೆಯಲ್ಲಿ ಸಾರ್ವಜನಿಕರು ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಡಾ.ಪುನೀತ್ ರಾಘವೇಂದ್ರ ಹೇಳಿದ್ದಾರೆ.
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸರಕಾರ ಆಯೋಜಿಸಿರುವ ಯೋಗ ಸಂಗಮ ರಾಷ್ಟೀಯ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ ವಿಶಾಖಪಟ್ಟಣ ದಲ್ಲಿ ಪ್ರಧಾನಮಂತ್ರಿಗಳು ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಸ್ಥಳೀಯ ನಾಗರಿಕರು ಸೇರಿದಂತೆ ಸುಮಾರು 500-550 ಭಾಗವಹಿಸುವ ನಿರೀಕ್ಷೆಯಿದೆ. ದೇಶಾದ್ಯಂತ ಸಂಸ್ಥೆಯ ಯುಟ್ಯೂಬ್ ನಲ್ಲಿ ನೇರ ಪ್ರಸಾರವೂ ನಡೆಯಲಿದೆ. ಯೋಗಾಭ್ಯಾಸದ ನಂತರ ತಪಸ್ಯ ಮಿತ್ರ ಫೌಂಡೇಶನ್ನಿನ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಸಲಹೆಗಾರರಾದ ಡಾ. ದ್ವಾರಕನಾಥ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾಗವಹಿಸುವವರು ಆಸ್ಪತ್ರೆಯ 8494935215 ನಂಬರಿಗೆ ಫೋನಾಯಿಸಿ ನೋಂದಾಯಿಸಬಹುದಾಗಿದೆ.
ಕಾರ್ಯಕ್ರಮವನ್ನು ಯೆನೆಪೋಯ ಪರಿಗಣಿಸಲ್ಪಟ್ಟ ವಿ.ವಿಯ ಕುಲಸಚಿವರಾದ ಗಂಗಾಧರ ಸೋಮಯಾಜಿ ಉದ್ಘಾಟಿಸಲಿದ್ದಾರೆ. ಯೆನೆಪೋಯ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ. ಗುರುರಾಜ್ ಹೆಚ್., ಯೆನೆಪೋಯ ಹೋಮಿಯೋಪತಿ ಪ್ರಾಂಶುಪಾಲ ಡಾ. ವಿಜಯೇಂದ್ರ ವಿ. ಇಟಗಿ ಭಾಗವಹಿಸಲಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಸಹ ಪ್ರಾಧ್ಯಾಪಕಿ ಡಾ.ಸಂಗೀತಲಕ್ಷ್ಮಿ ಸಹ ಪ್ರಾಧ್ಯಾಪಕಿ ಡಾ.ಪದ್ಮಶ್ರೀ, ಸಹ ಪ್ರಾಧ್ಯಾಪಕ ಶ್ರೀ.ಅಜಿತ್ ಕೆ. ಉಪಸ್ಥಿತರಿದ್ದರು.