ಜ.23: ತೋಡಾರ್ ಆದರ್ಶ್ ಶಾಲೆಯಲ್ಲಿ ದ.ಕ. ಜಿಲ್ಲಾ ಮಟ್ಟದ ಅಲ್ ಬಿರ್ರ್ ಕಿಡ್ಸ್ ಫೆಸ್ಟ್
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ 14 ಅಲ್ ಬಿರ್ರ್ ಶಾಲೆಗಳ ಕಿಡ್ಸ್ ಫೆಸ್ಟ್ ಕಾರ್ಯಕ್ರಮ ಜ.23ರಂದು ಬೆಳಗ್ಗೆ 9 ಗಂಟೆಗೆ ತೋಡಾರ್ ಆದರ್ಶ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.
ಅಲ್ ಬಿರ್ರ್ ವಿದ್ಯಾರ್ಥಿಗಳ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.
ಮಂಗಳವಾರ ಬೆಳಗ್ಗೆ 9ಗಂಟೆಗೆ ಆದರ್ಶ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಮಹಮ್ಮದ್ ಆಸಿಫ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಯ್ಯದ್ ಅಕ್ರಮ್ ಆಲಿ ತಂಙಳ್ ರಾಹ್ಮನಿ ದುವಾ ಆಶೀರ್ವಾಚನ ನೀಡಲಿದ್ದಾರೆ. ಅಲ್ ಬಿರ್ರ್ ಕಿಡ್ಸ್ ಫೆಸ್ಟ್ ಚೆಯರ್‌ಮ್ಯಾನ್ ಉಸ್ಮಾನ್ ಹಾಜಿ ಏರ್ ಇಂಡಿಯಾ ಅಧ್ಯಕ್ಷತೆ ವಹಿಸಲಿದ್ದು, ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಉಸ್ಮಾನುಲ್ ಫೈಝಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಲ್ ಬಿರ್ರ್ ನಿರ್ದೇಶಕರಾದ ಕೆ.ಪಿ ಮಹಮ್ಮದ್ ದಿಕ್ಸುಚಿ ಭಾಷಣ ಮಾಡಲಿದ್ದು, ಅಲ್ ಬಿರ್ರ್ ಜಿಲ್ಲಾ ಕೋಡಿನೇಟರ್ ಶುಕುರ್ ದಾರಿಮಿ ಸೇರಿದಂತೆ ಸಾಮಾಜಿಕ, ಧಾರ್ಮಿಕ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಿಡ್ಸ್ ಫೆಸ್ಟ್ ಚೆಯರ್‌ಮ್ಯಾನ್ ಉಸ್ಮಾನ್ ಹಾಜಿ ಏರ್ ಇಂಡಿಯಾ, ಕಾರ್ಯದರ್ಶಿ ಅಬ್ದುಲ್ ಸಲಾಂ ಬೂಟ್ ಬಝಾರ್, ಕೋಶಾಧಿಕಾರಿ ಎಮ್. ಜಿ. ಮಹಮ್ಮದ್ ಹಾಜಿ ತೋಡಾರ್, ಆದರ್ಶ್ ಅಲ್ ಬಿರ್ರ್ ಕೋಡಿನೇಟರ್ ಆರಿಫ್ ಕಮ್ಮಾಜೆ ಉಪಸ್ಥಿತರಿದ್ದರು.