×
Ad

ಜೂ.23: ಮಂಗಳೂರಿನಲ್ಲಿ ಸಿಪಿಎಂ ಪ್ರತಿಭಟನೆ

Update: 2025-06-16 18:30 IST

ಮಂಗಳೂರು: ಕೋಮುವಾದದ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿ, ಕುಡುಪು ಗುಂಪುಹತ್ಯೆ ಪ್ರಕರಣದಲ್ಲಿ ಹೊಸದಾಗಿ ಎಫ್‌ಐಆರ್ ದಾಖಲಿಸಿ ಮರು ತನಿಖೆ ನಡೆಸಲು ಆಗ್ರಹಿಸಿ, ಈ ಅವಧಿಯಲ್ಲಿ ಮತೀಯ ದ್ವೇಷ, ಅಸಹನೆಗಳಿಂದ ಕೊಲೆಗೀಡಾದವರ ಕುಟುಂಬಗಳಿಗೆ ಪರಿಹಾರ ಧನ ವಿತರಿಸಲು ಒತ್ತಾಯಿಸಿ ಜೂ.23ರಂದು ಸಂಜೆ 4:30ಕ್ಕೆ ನಗರದ ಕ್ಲಾಕ್ ಟವರ್ ಬಳಿ ಸಿಪಿಎಂ ದ.ಕ.ಸಮಿತಿಯ ವತಿಯಿಂದ ಪ್ರತಿಭಟನೆ ನಡೆಯಲಿದೆ.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೋಮುದ್ವೇಷ, ಪ್ರತೀಕಾರದ ನೆಪದಲ್ಲಿ ನಡೆದ ಮತೀಯ ಹಿನ್ನಲೆಯ ಎಲ್ಲಾ ಕೊಲೆ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ಆಗ್ರಹಿಸಿ, ಮೂರು ದಶಕದ ಅವಧಿಯಲ್ಲಿ ನಡೆದಿರುವ ಮತೀಯ ದ್ವೇಷ, ಅಸಹನೆ, ಪ್ರತೀಕಾರದ ಕೊಲೆ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News