ಜೂ.25: ಕುಲಶೇಖರ, ಕುಡುಪು, ನೀರುಮಾರ್ಗ : ವಿದ್ಯುತ್ ನಿಲುಗಡೆ
ಮಂಗಳೂರು: ಕುಲಶೇಖರ ಉಪಕೇಂದ್ರದಿಂದ ಹೊರಡುವ ಕುಡುಪು, ನೀರುಮಾರ್ಗ, ಕುಲಶೇಖರ ಅಡ್ಯಾರ್ ಫೀಡರ್‌ಗಳ ವ್ಯಾಪ್ತಿಯಲ್ಲಿ ಜೂ.25ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ.
ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಭಟ್ರಕೋಡಿ, ಕೆಲರಾಯಿ, ಪಾಲ್ದನೆ, ಕೋನಿಮಾರ್, ತಾರಿಗುಡ್ಡೆ, ಕುಡುಪು, ಕುಲಶೇಖರ, ನೂಜಿ, ಚೌಕಿ, ಬೈತುರ್ಲಿ, ಕೆಎಚ್‌ಬಿ ಲೇಔಟ್, ನೀರುಮಾರ್ಗ, ಬಿತ್ತುಪಾದೆ, ಮಲ್ಲೂರು, ಬೊಂಡಂತಿಲ, ಬದ್ರಿಯಾನಗರ, ಪಡು, ದೆಮ್ಮಲೆ, ಅಡ್ಯಾರ್, ಅಡ್ಯಾರ್ ಕಟ್ಟೆ, ವಳಚ್ಚಿಲ್, ವಳಚ್ಚಿಲ್ ಪದವು, ಅರ್ಕುಳ, ಮೇರ್ಲಪದವು, ಮೇರೆಮಜಲು, ತುಪ್ಪೆಕಲ್ಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಕೊಣಾಜೆ,ಮುಡಿಪು, ಉಳ್ಳಾಲ: ಕೊಣಾಜೆ ಉಪಕೇಂದ್ರದಿಂದ ಹೊರಡುವ ಕೊಣಾಜೆ, ಬೆಳ್ಮ, ಮುಡಿಪು, ಕಾಯರ್‌ಗೋಳಿ, ಪಜೀರ್, ಬೋಳಿಯಾರ್, ಕೆಐಎಡಿಬಿ ವಾಟರ್ ಸಪ್ಲೈ, ಮಂಜನಾಡಿ, ಕಿನ್ಯಾ, ಉಳ್ಳಾಲ ಎಕ್ಸ್‌ಪ್ರೆಸ್ ಮತ್ತು ಇನ್‌ಫೋಸಿಸ್ ಫೀಡರುಗಳಲ್ಲಿ ಹಾಗೂ ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ ತೊಕ್ಕೊಟ್ಟು, ಉಳ್ಳಾಲ, ಕುಂಪಲ, ಕುತ್ತಾರ್, ಮಂಚಿಲ, ಮೇಲಂಗಡಿ ಹಾಗೂ ಕೋಟೆಕಾರ್ ಉಪ ಕೇಂದ್ರದಿಂದ ಹೊರಡುವ ತಲಪಾಡಿ, ಕೊಂಡಾಣ ಮತ್ತು ಕೋಟೆಕಾರ್ ಫೀಡರ್ ಹಾಗೂ ಜೆಪ್ಪು ಉಪಕೇಂದ್ರದಿಂದ ಹೊರಡುವ ಕಡೆಕಾರ್ ಫೀಡರುಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಜೂ.25ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ನಿಲುಗಡೆಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
ಕೂಳೂರು, ಚಿಲಿಂಬಿ, ಮರಕಡ: ಕಾವೂರು ವಿದ್ಯುತ್ ಕೇಂದ್ರದಿಂದ ಹೊರಡುವ ಕೂಳೂರು, ಮರಕಡ, ಕುಂಜತ್ತಬೈಲ್ ಮತ್ತು ಚಿಲಿಂಬಿ ವಿದ್ಯುತ್ ಮಾರ್ಗಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಜೂ.25ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ.
ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಗಾಂಧಿನಗರ, ಶಂಕರನಗರ, ಶಾಂತಿನಗರ, ಮಾಲಾಡಿ, ಮಲ್ಲಿ ಲೇಔಟ್, ಅಂಬಿಕಾನಗರ, ವಿದ್ಯಾನಗರ, ಪಂಜಿಮೊಗರು, ರಾಯಿಕಟ್ಟೆ, ಕೂಳೂರು ಜಂಕ್ಷನ್, ಮೇಲು ಕೊಪ್ಪಳ, ಮಾಲೆಮಾರ್ ರಕ್ತೇಶ್ವರಿ ದೇವಸ್ಥಾನ, ರಾಷ್ಟ್ರೀಯ ಹೆದ್ದಾರಿಯ ಪೂರ್ವಭಾಗದ ಪ್ರದೇಶಗಳು, ಕೊಟ್ಟಾರ, ಪ್ರೇಮಾ ಲೇಔಟ್, ಬಂಗ್ರಕೂಳೂರು, ದಿವ್ಯನಗರ, ಉಲ್ಲಾಸನಗರ, ಜ್ಯೋತಿ ನಗರ, ಕೊರಂಟಾಡಿ, ಮರಕಡ, ಕುಂಜತ್ತಬೈಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.