ನ.3: ಕೃಷ್ಣಾಪುರದಲ್ಲಿ ಸೀರತ್ ಸಮಾವೇಶ
Update: 2023-11-02 15:41 IST
ಮಂಗಳೂರು, ನ.2: ಯುನಿವೆಫ್ ಕರ್ನಾಟಕ-2023ರ ಅಕ್ಟೋಬರ್ 6ರಿಂದ ಡಿಸೆಂಬರ್ 22ರವರೆಗೆ 'ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ (ಸ)' ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಯುಕ್ತ ನ.3ರ ಸಂಜೆ 6:45ಕ್ಕೆ ಕೃಷ್ಣಾಪುರದ ಪ್ಯಾರಡೈಸ್ ಗ್ರೌಂಡ್ ನಲ್ಲಿ ಸೀರತ್ ಸಮಾವೇಶ ಜರುಗಲಿದೆ.
ನಿಮ್ರಾ ಮಸೀದಿಯ ಖತೀಬ್ ಹಾಗೂ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ 'ಪ್ರವಾದಿ ಮುಹಮ್ಮದ್ (ಸ.) ರ ಮಾದರಿ ಜೀವನ' ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ಸ್ಥಳೀಯ ಉದ್ಯಮಿ ಬಿ.ಎಸ್.ಹನೀಫ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಕೃಷ್ಣಾಪುರ ಶಾಖಾಧ್ಯಕ್ಷ ಅಬ್ದುಲ್ ಖಾದರ್ ಬಾಂಬೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.