ಕರಾವಳಿ ಉತ್ಸವ ಹಿನ್ನೆಲೆ| ಮಂಗಳೂರು: ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಸಲಹೆ-ಸೂಚನೆ
ಮಂಗಳೂರು, ಡಿ.19: ದ.ಕ. ಜಿಲ್ಲಾಡಳಿತದ ವತಿಯಿಂದ ಡಿ.20ರಿಂದ 2026ರ ಜನವರಿ 2ರವರೆಗೆ ಪ್ರತೀ ದಿನ ಸಂಜೆ 5ರ ಬಳಿಕ ನಗರದಲ್ಲಿ ನಡೆಯುವ ಕರಾವಳಿ ಉತ್ಸವದ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಸಲಹೆ-ಸೂಚನೆ
ಈ ಅವಧಿಯಲ್ಲಿ ದಿನನಿತ್ಯ ವಿವಿಧ ಕಾರ್ಯಕ್ರಮಗಳು ನಡೆಯಲಿರುವುದರಿಂದ ಗಣ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ವಾಹನಗಳು ಸೇರಲಿದೆ. ಇದರಿಂದ ನಗರದ ಕೆಲವು ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇವೆ. ಹಾಗಾಗಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಸಲಹೆ-ಸೂಚನೆಗಳನ್ನು ನೀಡಿದೆ.
*ಲಾಲ್‌ಬಾಗ್‌ನಿಂದ ಕರಾವಳಿ ಮೈದಾನದವರೆಗಿನ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ.
*ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸಬೇಕು.
*ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಪ್ಲಾಕ್ಸ್‌ಗಳನ್ನು ಅಳವಡಿಸಿದ್ದು ಮಾರ್ಗಸೂಚಿಯನ್ನು ಅನುಸರಿಸಬೇಕು.
*ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಉರ್ವ ಮಾರ್ಕೆಟ್ ಮೈದಾನದಲ್ಲಿ (ಕಾರು), ಗಾಂಧಿನಗರ ಸರಕಾರಿ ಶಾಲೆ (ಪ್ರೆಸ್‌ಕ್ಲಬ್)ಯ ಬಳಿ (ದ್ವಿಚಕ್ರ/ಕಾರು), ಲೇಡಿಹಿಲ್ ಚರ್ಚ್ ಪಾರ್ಕಿಂಗ್ (ದ್ವಿಚಕ್ರ/ಕಾರು), ಮಣ್ಣಗುಡ್ಡ ಕೆನರಾ ಸ್ಕೂಲ್ ಮೈದಾನದಲ್ಲಿ (ದ್ವಿಚಕ್ರ/ಕಾರು), ತಿಮ್ಮಪ್ಪಹೋಟೆಲ್ ಆವರಣದಲ್ಲಿ (ದ್ವಿಚಕ್ರ/ಕಾರು), ಸ್ಕೌಟ್ ಗೈಡ್ ಹಾಲ್ ಆವರಣ ದಲ್ಲಿ (ಕರಾವಳಿ ಮೈದಾನ ಹಿಂಭಾಗ) (ದ್ವಿಚಕ್ರ),ಉರ್ವ ಮಾರ್ಕೆಟ್ ರಸ್ತೆ- (ದ್ವಿಚಕ್ರ), ಹ್ಯಾಟ್ ಹಿಲ್ ರಸ್ತೆ (ದ್ವಿಚಕ್ರ)ಯಲ್ಲಿ ಪಾರ್ಕಿಂಗ್‌ಗೆ ಸ್ಥಳ ನಿಗದಿಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದೆ.