ʼನಶೆ ಮುಕ್ತʼ ಮಂಗಳೂರು ಅಭಿಯಾನದ ಅಂಗವಾಗಿ ಕಾರ್ನರ್ ಮೀಟ್ ಕಾರ್ಯಕ್ರಮ
ಮಂಗಳೂರು : ಮೇಕ್ ಆ ಚೇಂಜ್ ಫೌಂಡೇಷನ್ ಮತ್ತು ಮಂಗಳೂರೂ ನಗರ ಪೊಲೀಸ್ ಇಲಾಖೆಯ ಸಹಯೋಗದಿಂದ “ನಶೆ ಮುಕ್ತ” ಮಂಗಳೂರು ಅಭಿಯಾನದ ಅಂಗವಾಗಿ ಕಾರ್ನರ್ ಮೀಟ್ ಕಾರ್ಯಕ್ರಮ ಮಂಗಳೂರಿನ ಸೈಂಟ್ ತೆರೆಸಾ ಶಾಲೆ ಹಾಗೂ ಸಂತ ಆನ್ಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ನವಿನ್ ಡಿಸೋಜಾ ಮಾತನಾಡಿ, “ನಮಗೆಲ್ಲಾ ಗೊತ್ತಿರುವಂತೆ ನಶೆ ನಮ್ಮ ಕುಟುಂಬ, ಸಮಾಜ, ಮತ್ತು ದೇಶದ ಭವಿಷ್ಯದೊಂದಿಗೆ ಆಟವಾಡುತ್ತದೆ. ಇದನ್ನು ನಿಲ್ಲಿಸಲು ಪ್ರತಿಯೊಬ್ಬರೂ ತಮ್ಮ ಮಟ್ಟಿನಲ್ಲಿ ಕೆಲಸ ಮಾಡಬೇಕು” ಎಂದು ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹಿಸಿದರು.
ಮೇಕ್ ಆ ಚೇಂಜ್ ಫೌಂಡೇಷನ್‌ನ ಸಂಸ್ಥಾಪಕ ಸುಹೈಲ್ ಕಂದಕ್ ಮಾತನಾಡಿ, “ಮಂಗಳೂರು ವಿಸ್ತೀರ್ಣ ಹಾಗೂ ಸಂಸ್ಕೃತಿ, ಶಿಕ್ಷಣ, ಆರೋಗ್ಯ ವಿಧಾನಗಳಲ್ಲಿ ಹೆಗ್ಗಳಿಕೆಗೊಂಡ ನಗರ. ಆದರೆ ಇತ್ತೀಚಿನ ಕೆಲವು ದುರ್ಘಟನೆಗಳಿಂದ ಹಾನಿಕರ ಸುದ್ದಿಗೆ ಹೆಚ್ಚು ಹೆಸರು ಬಂದಿರುವುದು ನೋವಿನ ವಿಷಯವಾಗಿದೆ. ಹಾಗಾಗಿ ನಮ್ಮ ಯುವಕರು ಮತ್ತು ವಿದ್ಯಾರ್ಥಿಗಳು ‘ನಶೆ ಮುಕ್ತ ಮಂಗಳೂರು’ ಅಭಿಯಾನದೊಂದಿಗೆ ಕೈಜೋಡಿಸಬೇಕು. ನಮ್ಮೆಲ್ಲರ ಒಗ್ಗಟ್ಟಿನಿಂದ ಮಂಗಳೂರನ್ನು ಮರುಸ್ಥಾಪಿಸಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ದೇಶದ ಗಮನ ಸೆಳೆಯುವಂತಹ ಬೆಳವಣಿಗೆಯನ್ನು ಕಾಣುವಂತೆ ಮಾಡಬೇಕು ಎಂದರು.
ಮಂಗಳೂರು ಪಾಂಡೇಶ್ವರ ಠಾಣೆಯ ಇನ್‌ಸ್ಪೆಕ್ಟರ್ ಗುರುಪ್ರಸಾದ್ ಮಾತನಾಡಿ, ನಶೆ ವಿರುದ್ದ ಸಕಾರಾತ್ಮಕ ಜಾಗೃತಿ ಮೂಡಿಸುವ ಅಗತ್ಯದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಸಮಯದಲ್ಲಿ ಬಾರ್ನ್ ಅಗೈನ್ ಫೌಂಡೇಷನ್ ಮುಖ್ಯಸ್ಥೆ ಬೀನಾ, ಸಂತ ತೆರೆಸಾ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಲೌರ್ಡ್ಸ್, ಸಂತ ಆನ್ಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಎಂ.ರಚನಾ ಎಸಿ, ಲಾವಣ್ಯ ಬಲ್ಲಾಳ್, ಬಶೀರ್ ಡಿಎಕ್ಸ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.