ಸೆ.7ರಂದು ಜೈ ಭಾರತಿ ಟ್ರೋಫಿ ದ.ಕ.ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟ
ಮಂಗಳೂರು , ಆ.31: ಜೈ ಭಾರತಿ ತರುಣ ವೃಂದ ಉರ್ವ, ಹೊಗೆಬೈಲ್ ಇದರ ವತಿಯಿಂದ ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮತ್ತು ಮಂಗಳೂರು ತಾ. ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಜೈ ಭಾರತಿ ಟ್ರೋಫಿ-25 ದ.ಕ..ಜಿಲ್ಲಾ ಮಟ್ಟದ ಪುರುಷರ ಅಹ್ವಾನಿತ ತಂಡಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಸೆ.7ರಂದು ಉರ್ವದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬೆಳಗ್ಗೆ 11ಕ್ಕೆ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್ನ ಅಧ್ಯಕ ರಾಕೇಶ್ ಮಲ್ಲಿ ದೀಪ ಪ್ರಜ್ವಲನೆ ಹಾಗೂ ಉದ್ಯಮಿ ಗಿರಿಧರ್ ಶೆಟ್ಟಿ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಪದ್ಮರಾಜ್.ಆರ್,ಪೂಜಾರಿ, ಸಂತೋಷ್ ಕುಮಾರ್ ಶೆಟ್ಟಿ, ವಿವೇಕ್ ಆಳ್ವ, ದಿನಕರ ಶೆಟ್ಟಿ , ಪ್ರಶಾಂತ್ ಸನಿಲ್, ಭಾಸ್ಕರ್.ಕೆ.ಮೊಯ್ಲಿ, ಪಿ.ಬಿ.ಹರೀಶ್ ರೈ , ಸುಪ್ರೀತ್ ಆಳ್ವ, ಬಾಬಾ ಅಲಂಕಾರ್, ಸಂಪತ್ ಶೆಟ್ಟಿ, ಸತೀಶ್ ಆಳ್ವ ಮುಡಾರೆ, ದೇವಕಿ ಅಶೋಕ ನಗರ, ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಹಿಂಪ ಮಂಗಳೂರು ಅಧ್ಯಕ್ಷ ಎಚ್. ಕೆ. ಪುರುಷೋತ್ತಮ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ವಕೀಲ ರಾಘವೇಂದ್ರ ರಾವ್, ರಾಜೇಶ್ ಕುಮಾರ್ ಅಮ್ಟಾಡಿ, ವಿಶ್ವಾಸ್‌ಕುಮಾರ್ ದಾಸ್, ದಿನಕರ ಸುವರ್ಣ, ವೆಂಕಟೇಶ ದಾಸ್, ಅನಿಲ್ ಪೂಜಾರಿ , ಗಣೇಶ್ ಕುಲಾಲ್, ಗಣೇಶ ಶೆಣೈ ಮುಲ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಜೇತರಿಗೆ ಟ್ರೋಫಿ ಸಹಿತ ಪ್ರಥಮ 30 ಸಾವಿರ ರೂ, ದ್ವಿತೀಯ 20 ಸಾವಿರ ರೂ., ತೃತೀಯ ಹಾಗೂ ಚತುರ್ಥ ತಲಾ 10 ಸಾವಿರ ರೂ. ನಗದು ನೀಡಲಾಗುವುದೆಂದು ಪ್ರಕಟನೆ ತಿಳಿಸಿದೆ.